ಹೃದಯದ ಕಾಯಿಲೆಗೆ ಹೆದರಿ ಸಾವಿಗೆ ಶರಣಾದ ಪೌರಕಾರ್ಮಿಕ

ಕುಮಟಾ: ಪುರಸಭೆ ಪೌರ ಕಾರ್ಮಿಕನೋರ್ವನು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಮಟಾದಲ್ಲಿ ನಡೆದಿದೆ. ಕುಮಟಾ ಪಟ್ಟಣದ ಹಳೇ ಮೀನು ಮಾರುಕಟ್ಟೆಯ ಪೌರ ಕಾರ್ಮಿಕರ ಕಾಲೋನಿಯಲ್ಲಿನ ಸಾರ್ವಜನಿಕ ಬಾವಿಯಲ್ಲಿ ಪೌರಕಾರ್ಮಿಕ ಶ್ರೀಕಾಂತ ಪಕೀರ ಹರಿಜನ್ ಎಂಬಾತನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುರಸಭೆಯಲ್ಲಿ ಕಳೆದ 20 ವರ್ಷಗಳಿಂದ ಪೌರ ಕಾರ್ಮಿಕನಾಗಿ ಕಲಸ ಮಾಡುತ್ತಿದ್ದ ಈತನಿಗೆ ಹೃದಯ ಸಂಬoದಿ ಕಾಯಿಲೆ ಇತ್ತು ಎನ್ನಲಾಗಿದೆ. ಈತನು ಮನೆಯಿಂದ ನಾತ್ತೆಯಾಗಿದ್ದ ಎಂದು ಹುಡುಕಾಟ ನಡೆಸಲಾಗಿತ್ತು. ಮಾರನೇ ದಿನವೇ ಬಾವಿಯಲ್ಲಿ ಶವ ಪತ್ತೆಯಾಗಿದೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

Exit mobile version