“ಕಾಂಗ್ರೆಸ್ಸಿನ ಅಭ್ಯರ್ಥಿ ಶ್ರೀಮತಿ ಅಂಜಲಿ ಅವರೇ”!? ವೈರಲ್ ಆದ ಮತದಾರನ ಬರಹದಲ್ಲಿ ಏನಿದೆ?

“ಕಾಂಗ್ರೆಸ್ಸಿನ ಅಭ್ಯರ್ಥಿ ಶ್ರೀಮತಿ ಅಂಜಲಿ ಅವರೇ”. ಆರಂಭಿಕ ಸಾಲುಗಳಲ್ಲಿ ಈ ರೀತಿ ಇರುವ ಓರ್ವ ಮತದಾರನ ಬರಹ ಈಗ ವೈರಲ್ ಆಗಿದೆ. ವೈರಲ್ ಆದ ಮತದಾರನ ಬರಹದಲ್ಲಿ ಏನಿದೆ ನೋಡಿ. ತಾವು, ಹೋದಲ್ಲಿ ಬಂದಲ್ಲಿ “ಬಿಜೆಪಿಯವರು, ಕಾಗೇರಿಯವರು ಏನನ್ನೂ ಮಾಡಿಲ್ಲ, ಏನನ್ನೂ ಮಾಡಿಲ್ಲ, ಏನನ್ನೂ ಮಾಡಿಲ್ಲ.” ಹೇಳುತ್ತಾ ತಿರುಗಾಡುತ್ತಿದ್ದೀರಿ. ಆದರೆ, ನೀವು ನಿಮ್ಮ ಖಾನಾಪುರ ಕ್ಷೇತ್ರದಲ್ಲಿ ನಿಜವಾಗಿಯೂ ಸರಿಯಾದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇ ಸತ್ಯವಾಗಿದ್ದರೆ,,, ನಿಮ್ಮ ಕ್ಷೇತ್ರದ ಪ್ರಾಮಾಣಿಕ ಮತದಾರರು. ಸಿಟ್ಟಿಂಗ್ ಎಂ ಎಲ್ ಎ ಆಗಿದ್ದ ನಿಮ್ಮನ್ನು, ಭಾರೀ ಕಾಂಗ್ರೆಸ್ ಅಲೆಯ ನಡುವೆಯೂ 57,000 ಭಾರೀ ಮತಗಳ ಅಂತರದಿoದ ಯಾಕೆ ಕಿತ್ತೊಗೆದರು….? ಈ ವಿಷಯದ ಬಗ್ಗೆ ಒಮ್ಮೆ ಸ್ಪಷ್ಟೀಕರಣ ನೀಡಿ ನಿಮ್ಮ ಪ್ರಾಮಾಣಿಕತೆಯ ಪ್ರದರ್ಶನ ಮಾಡಿ.

ನಿಮ್ಮ ಒಂದು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯನ್ನೇ ಮಾಡಲು ಸಾಧ್ಯವಾಗದೇ ಜನರಿಂದ ತಿರಸ್ಕರಿಸಲ್ಪಟ್ಟ ನೀವು, 8 ವಿಧಾನಸಭಾ ಕ್ಷೇತ್ರಗಳನ್ನು ಏಕಾಏಕಿ ಪೂರಾ ಉದ್ಧಾರ ಮಾಡುತ್ತೇನೆ ಎಂದು ತಿರುಗಾಡುತ್ತಿರುವದು ಅತ್ಯಂತ ಹಾಸ್ಯಾಸ್ಪದ ಸಂಗತಿ. ಇನ್ನು ನಿಮ್ಮ ಜೊತೆ ಸೇರಿ ನಮ್ಮ ದೇಶಪಾಂಡೆ ಸಾಹೇಬರು ಕೂಡ ಬಿಜೆಪಿಯನ್ನು ವಾಚಾಮಗೋಚರ ಬಯ್ಯತ್ತಿದ್ದಾರೆ. ಗಾಜಿನ ಮನೆಯಲ್ಲಿ ವಾಸಿಸುವವರು ಬೇರೆಯವರ ಮನೆಯ ಮೇಲೆ ಕಲ್ಲು ಹೊಡೆಯಬಾರದು ಎನ್ನುವುದನ್ನು ಮರೆತಂತಿದೆ.

ಅವರು 25 ವರ್ಷಗಳ ಕಾಲ ಮಂತ್ರಿಗಳಾಗಿ, ಅದರಲ್ಲೂ ಸುಮಾರು 20 ವರ್ಷಗಳ ಕಾಲ ಕೈಗಾರಿಕಾ ಮಂತ್ರಿಗಳಾಗಿ ಅಧಿಕಾರ ಅನುಭವಿಸಿದರೂ ಸಹ, ಅವರಿಗೆ ಜಿಲ್ಲೆಯ ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವಂಥ, ಒಂದೇ ಒಂದು ಉತ್ತಮ ಕೈಗಾರಿಕೆ ಸ್ಥಾಪಿಸುವ ಯೋಗ್ಯತೆ ಅವರಿಗೆ ಇಲ್ಲದೇ ಹೋಯಿತು. ಆಗ 25 ವರ್ಷಗಳ ಕಾಲ ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಜಿಲ್ಲೆಗೊಂದು ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ಅವಶ್ಯಕತೆಯಿದೆ ಎಂದು ಅವರಿಗೆ ಅನ್ನಿಸದೇ ಇದ್ದದ್ದು, ಅವರ ದೂರದೃಷ್ಟಿತ್ವದ ಕೊರತೆಯ ಫಲ, ಹಾಗೂ ನಮ್ಮ ದುರಾದೃಷ್ಟ.

ಕಳೆದ 10 ವರ್ಷಗಳಲ್ಲಿ ಮೋದಿಯವರ ಏನು ಮಾಡಿದ್ದಾರೆ.! ಎಂದು ಕೇಳುತ್ತಿರುವ ನೀವು ಅದಕ್ಕಿಂತ ಹಿಂದಿನ 60 ವರ್ಷಗಳಲ್ಲಿ ಏನು ಮಾಡಿದ್ದೀರಿ ಎಂದು ಹೇಳಿ. ನೀವುಗಳೇ ಇನ್ನೂ ತನಕ ಏನನ್ನೂ ಮಾಡಿಲ್ಲ! ಬಿಜೆಪಿಯ ಕಡೆ ಬೆರಳು ಮಾಡಿ ನೀವು ಹೇಳಬೇಕೆಂದರೆ ನೀವೇನಾದರೂ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಿದ್ದರೆ(?) ನಿಮಗೆ ಹೇಳುವ/ಕೇಳುವ ನೈತಿಕತೆ ಇರುತ್ತಿತ್ತು.

ಕಾಂಗ್ರೆಸ್ಸಿನ ಅಭ್ಯರ್ಥಿ ಶ್ರೀಮತಿ ಅಂಜಲಿ ಅವರೇ, ಕಾಂಗ್ರೆಸ್ 60 ವರ್ಷಗಳಲ್ಲಿ ಏನು ಮಾಡಿದೆ ಎಂದು ವಿವರಿಸಲು ಏನಾದರೂ ಹೂರಣ ಇದೆಯೇ ಎನ್ನುವದನ್ನು ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಆಗ ಕೇವಲ ಹಗರಣಗಳ ಸರಮಾಲೆಗಳೇ ಕಣ್ಮುಂದೆ ಬರುತ್ತವೆ….. ಕೋಲ್ ಗೇಟ್, ಬೋಫೋರ್ಸ, ಕಾಮನ್ ವೆಲ್ತ, ತುರ್ತು ಪರಿಸ್ಥಿತಿ, 2ಜಿ , ನ್ಯಾಶನಲ್ ಹೆರಾಲ್ಡ್ ಒಂದೇ ಎರಡೇ… ಸ್ವಲ್ಪವಾದರೂ ಆತ್ಮಸಾಕ್ಷಿಗೆ ಅನುಗುಣವಾಗಿ ಮಾತನಾಡಿ. . ಈ ರೀತಿಯ ಬರಹ ಈಗ ಎಲ್ಲೆಡೆ ಹರಿದಾಡುತ್ತಿದ್ದು, ವೈರಲ್ ಆಗಿದೆ.

ವೈರಲ್ ಆದ ಮತದಾರನ ಬರದ ಹೈಲೈಟ್ಸ್

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version