ಇಬ್ಬರು ಅಪ್ರಾಪ್ತ ಬಾಲಕಿಯರು ನಾಪತ್ತೆ: ಆಗಿದ್ದಾದರು ಏನು?

ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿರುವ ಹೋಗಿರುವ ಶಂಕೆ

ಶಿರಸಿ: ಇಲ್ಲಿನ ಇಬ್ಬರು ಅಪ್ರಾಪ್ತ ಬಾಲಕಿಯರು ನಾಪತ್ತೆಯಾಗಿದ್ದು, ಪಾಲಕರ ಆತಂಕಕ್ಕೆ ಕಾರಣವಾಗಿದೆ. ಬಾಲ ಮಂದಿರಕ್ಕೆ ಹೋಗುವುದಾಗಿ ಹೇಳಿ ಹೋದವರನ್ನು ಯಾರೋ ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿರುವ ಹೋಗಿರುವ ಶಂಕೆ ವ್ಯಕ್ತವಾಗಿದೆ. ಗಣೇಶನಗರದ ಗೋಸಾವಿಗಲ್ಲಿಯ 7ನೇ ತರಗತಿ ವಿದ್ಯಾರ್ಥಿನಿ ಸಂಜನಾ ಯುವರಾಜ ಗೋಸಾವಿ (14), 3 ನೇ ತರಗತಿಯ ಅರ್ಚನಾ ದಶರಥ ಗೋಸಾವಿ (12) ನಾಪತ್ತೆಯಾದ ಅಪ್ರಾಪ್ತ ಬಾಲಕಿಯರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಇಲ್ಲಿದೆ ಉದ್ಯೋಗಾವಕಾಶ: ಹೊಸ ನೇಮಕಾತಿ: ವಿದ್ಯಾರ್ಹತೆ 7ನೇ ತರಗತಿ: 20 ಸಾವಿರ ಮಾಸಿಕ ವೇತನ

ಅಪ್ರಾಪ್ತ ಬಾಲಕಿಯರಿಬ್ಬರು ಕಾಣೆಯಾದ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಗಣೇಶನಗರದ ಗೋಸಾವಿಗಲ್ಲಿಯಲ್ಲಿರುವ ಮನೆಯಿಂದ, ತಾವು ಕಲಿಯುತ್ತಿರುವ ಕಾರವಾರದ ಬಾಲ ಮಂದಿರಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದರು ಈ ಇಬ್ಬರು ಬಾಲಕಿಯರು. ಆದರೆ, ಮರಳಿ ಮನೆಗೆ ಬಂದಿಲ್ಲವಾಗಿದ್ದು, ಸಂಬoಧಿಕರ ಮನೆಗೂ ತೆರಳಿಲ್ಲವಾಗಿದೆ.

ಹೀಗಾಗಿ ಈ ಅಪ್ತಾಪ್ತ ಬಾಲಕಿಯರನ್ನು ಯಾರೋ ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿದ್ದಾರೆ ಎಂದು ಶಂಕಿಸಲಾಗಿದೆ. ಅಪಹರಣ ಮಾಡಿಕೊಂಡು ಹೋದ ಮಗಳು ಹಾಗೂ ಮೈದುನನ ಮಗಳನ್ನು ಪತ್ತೆ ಮಾಡಿ, ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶೋಭಾ ಯುವರಾಜ ಗೋಸಾವಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version