ಹೊನ್ನಾವರ: ತಾಲೂಕಿನ ಶರಾವತಿ ನದಿಯಲ್ಲಿ ಪ್ರವಾಸಿಗರ ಬೋಟಿಂಗ್‌ಗೆ ಹೆಚ್ಚಿನ ಬೇಡಿಕೆ ಬಂದಿದೆ, ಆದರೆ ಶರಾವತಿ ನದಿ ತೀರದಲ್ಲಿ ಪರವಾನಗಿ ಹೊಂದಿರುವ ಪ್ರವಾಸಿ ಬೋಟ್ ಜೊತೆ, ಯಾವುದೇ ಪರವಾನಗಿ ಇಲ್ಲದ, ಪ್ರವಾಸಿಗರಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳದ ಬೋಟ್‌ಗಳೂ ಇವೆ. ಪ್ರತಿದಿನದಂತೆ ವಾಮನ ಅಂಬಿಗ ತಮ್ಮ ಮಗನೊಂದಿಗೆ ಮೀನುಗಾರಿಕೆ ದೋಣಿ ಮೂಲಕ ತನ್ಮಡಗಿ ಬಳಿ ತೆರಳಿ ಮೀನು ಹಿಡಿದು ವಾಪಸ್ಸಾಗುತ್ತಿದ್ದಾಗ, ಮಂಜುನಾಥ ಅಂಬಿಗ ಇವರ ಪ್ರವಾಸಿಗರನ್ನು ಕರೆತಂದ ಶಬರೀಶ ಎನ್ನುವ ಟೂರಿಸ್ಟ ಬೋಟ್ ದೋಣಿಗೆ ಡಿಕ್ಕಿ ಹೊಡೆದು ವಾಮನ ಅಂಬಿಗ ಮತ್ತು ಮಗ ಸಮರ್ಥ ಅಂಬಿಗ ಅವರಿಗೆ ಡಿಕ್ಕಿಯಾಗಿದೆ.
ಈ ಡಿಕ್ಕಿಯ ರಭಸಕ್ಕೆ ವಾಮನ ಅಂಬಿಗ ನೀರಿನಲ್ಲಿ ಬಿದ್ದುದ್ದು, ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ. ಬೋಟ್ ಡಿಕ್ಕಿಯಾದ ಪರಿಣಾಮ ಸಮರ್ಥ ಇವರ ಎಡಗೈ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಹೊನ್ನಾವರ ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ.
ಈ ಕುರಿತು ಮೀನುಗಾರ ವಾಮನ ಅಂಬಿಗ ಮಾತನಾಡಿ ಈ ಹಿಂದಿನಿoದಲೂ ಸಾಂಪ್ರದಾಯಿಕ ಮೀನುಗಾರಿಕೆ ನಡೆಸಿ ಜೀವನ ನಡೆಸುತ್ತಿದ್ದೇವೆ. ಮಗನಿಗೆ ರಜೆ ಇರುವುದರಿಂದ ಮೀನು ಹಿಡಿಯುದನ್ನು ತೋರಿಸಲು ದೋಣಿಯಲ್ಲಿ ಹೋಗಿದ್ದೇವು. ಮೀನುಗಾರಿಕೆ ಮುಗಿಸಿ ಬರುವಾಗ ಹಿಂದಿನಿoದ ಬೋಟ್ ಬಂದು ಡಿಕ್ಕಿಯಾಗಿದೆ. ಮಗನ ಕೈ ಭಾಗಕ್ಕೆ ಪೆಟ್ಟಾಗಿದೆ. ಕೈ ಎತ್ತಲು ಆಗುವುದಿಲ್ಲ. ದುಡಿಮೆ ಮಾಡಿ ಜೀವನ ನಡೆಸುವ ನಮಗೆ ದಿಕ್ಕು ತೋಚದಂತಾಗಿದೆ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೋಡಿಸಿದ್ದೇನೆ. ಇಲ್ಲಿ ಆಗುವುದಿಲ್ಲಾ ಬೇರೆಕಡೆಗೆ ಕರೆದುಕೊಂಡಿ ಹೋಗಿ ಎಂದಿದ್ದಾರೆ ಎಂದರು.
ಗಜಾನನ ಅಂಬಿಗ ಮಾತನಾಡಿ ಮೀನುಗಾರಿಕೆ ಅವಲಂಭಿಸಿ ಬಂದ ನಮಗೆ ದಂದೆ ಮಾಡಲು ಆಗುತ್ತಿಲ್ಲ ಹಗಲು ರಾತ್ರಿ ಪ್ರವಾಸಿಗರ ಬೋಟ್ ಹೋಗುವರಿಂದ ಬಲೆಗೆ ಹಾನಿಯಾಗುತಿದೆ, ಮೀನುಗಾರಿಕಾ ಸಚೀವರಾದ ಮಂಕಾಳ ವೈದ್ಯ ಅವರಲ್ಲಿ ಸಮಸ್ಯೆ ಆಗುತ್ತಿದೆ ಎಂದು ಬಗ್ಗೆ ಹಲವು ಬಾರಿ ಮನವಿ ನೀಡಿದ್ದೇವೆ, ಅವರು ಆಶ್ವಾಸನೆ ಕೋಟ್ಟಿದ್ದು ಬಿಟ್ಟರೆ ಯಾವುದೆ ಪ್ರಯೋಜನವಾಗಿಲ್ಲ.
ಮೀನುಗಾರರು ಉಪವಾಸ ಬೀಳುವ ಪರಿಸ್ಥಿತಿ ಬಂದಿದೆ, ಈ ಹಿಂದೆ ಇಂತಹದೆ ಘಟನೆ ನಡೆದಿತ್ತು ಯಾವುದೆ ಕ್ರಮ ಕೈಗೊಂಡಿಲ್ಲಾ, ಬೋಟಿನ ಶಬ್ದದಿಂದ ಸುತ್ತ-ಮುತ್ತಲಿನ ವಿದ್ಯಾರ್ಥಿಗಳಿಗೆ ಓದಲು-ಬರೆಯಲು ಆಗುತ್ತಿಲ್ಲಾ, ವಯಸ್ಸಾದವರಿಗೆ ಅನಾರೋಗಯ ಪೀಡಿತರಿಗೆ ವಿಶ್ರಾಂತಿ ಪಡೆಯಲು ಆಗದೇ ಪರಿತಪಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು. ಈ ಬಗ್ಗೆ ಅಧಿಕಾರಿಗಳು ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಅವರು ವಿಶೇಷ ಮುತುವರ್ಜಿ ವಹಿಸುವ ಮೂಲಕ ನೆಮ್ಮದಿಯ ವಾತವರಣ ಕಲ್ಪಿಸಬೇಕಿದೆ.
ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ