ತುಂಡಾಗಿಬಿದ್ದ ಹಗ್ಗ: ಕುಸಿದುಬಿದ್ದ ತೂಗು ಸೇತುವೆ : ತಾಯಿ-ಮಗು ಬಚಾವ್

ಹೊನ್ನಾವರ: ತೂಗು ಸೇತವೆಯ ಹಗ್ಗ ತುಂಡಾಗಿ ಸೇತುವೆ ಓರೆಯಾಗಿ ಸಂಪರ್ಕ ಕಡಿತಗೊಂಡ ಘಟನೆ ಹೊನ್ನಾವರ ತಾಲೂಕಿನಲ್ಲಿ ನಡೆದಿದೆ. ಈ ಘಟನೆಯಲ್ಲಿ ಅದೃಷ್ಟವಶಾತ್ ತಾಯಿ-ಮಗು ಅಪಾಯದಿಂದ ಪಾರಾಗಿದ್ದಾರೆ. ಹೌದು, ಹೊನ್ನಾವರ ತಾಲೂಕಿನ ಕೋಡಾಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಅನೀಲಗೋಡನಿಂದ ಹೆಗ್ಗಾರ್ ಬಳ್ಕೂರ್ ಗೆ ಸಂಪರ್ಕ ಕಲ್ಪಿಸುವ ತೂಗು ಸೇತುವೆಯ ಸಂಪರ್ಕ ಕಡಿತಗೊಂಡಿದೆ.
ಈ ಸೇತುವೆಯಲ್ಲಿ ಪ್ರತಿನಿತ್ಯ ನೂರಾರು ಸಂಖ್ಯೆಯ ಸಾರ್ವಜನಿಕರು ಸಂಚರಿಸುತ್ತಿದ್ದರು.

ಬೆಳಿಗ್ಗೆ 9 ಗಂಟೆಯ ಸುಮಾರಿಗೆ ತಾಯಿ ಮಗು ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪ್ರತಿ ನಿತ್ಯ ವಿದ್ಯಾರ್ಥಿಗಳು , ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹೆಗ್ಗಾರ ಮೂಲಕ ಸಂಚರಿಸುತ್ತಿದ್ದರು. ಶಾಲಾ ರಜಾ ಇರುವ ಹಿನ್ನಲೆಯಲ್ಲಿ ಓಡಾಟಗಳು ಕಡಿಮೆ ಇರುವ ಹಿನ್ನಲೆಯಲ್ಲಿ ಯಾವುದೆ ಅಹಿತಕರ ಘಟನೆ ನಡೆಯಲಿಲ್ಲಾ ಎನ್ನಲಾಗಿದೆ. ಈ ಸೇತುವೆ ಮುರಿದಿರುವ ಹಿನ್ನಲೆಯಲ್ಲಿ ಸಂಪರ್ಕ ಡಿತಗೊಂಡಿದ್ದು ಸಾರ್ವಜನಿಕರು ಸುಮಾರು 5 ಕೀಲೋಮೀಟರ ಸುತ್ತಿ ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಳ್ಕೂರು ಗ್ರಾಮ ಪಂಚಾಯತ ಸದಸ್ಯ ಗಣಪತಿ ನಾಯ್ಯ ಬಿಟಿ ಸಂಬoಧಪಟ್ಟ ಅಧಿಕಾರಿಗಳಿಗೆ ಮಾಹೀತಿ ನೀಡಿದರು, ಮತ್ತು ಕೋಡಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮಪ್ಪ ನಾಯ್ಕ ಅಧಿಕಾರಿಗಳ ಜೋತೆ ಸ್ಥಳದಲ್ಲಿ ಉಪಸ್ಥಿತರಿದ್ದು, ರ‍್ಯಾಯ ವ್ಯವಸ್ಥೆಯ ಕುರಿತು ಚರ್ಚಿಸಿದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version