ಸಾಮಾಜಿಕ ಜಾಲತಾಣದಲ್ಲಿ ಪರಿಚಯ: ವ್ಯಕ್ತಿಗೆ 1.48 ಲಕ್ಷ ರೂಪಾಯಿ ಪಂಗನಾಮ

ಯಲ್ಲಾಪುರ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯಿಂದ ಯಲ್ಲಾಪುರದ ವ್ಯಕ್ತಿಯೊರ್ವರು ಸುಮಾರು 1.48 ಲಕ್ಷ ರೂಪಾಯಿ ಪಂಗನಾಮ ಹಾಕಿಸಿಕೊಂಡಿದ್ದಾರೆ. ಯಲ್ಲಾಪುರದ ನಿವೃತ್ತ ಅಂಚೆ ನೌಕರ ಗಣಪತಿ ರಾಮಚಂದ್ರ ಭಟ್ ಮೋಸಕ್ಕೊಳಗಾದ ವ್ಯಕ್ತಿ. ದೆಹಲಿಯ ಫಾರ್ ಈಸ್ಟ ಕೊರಿಯರ್ ಸಿಬ್ಬಂದಿ ಜೈಸನ್ ಫರ್ನಾಂಡೀಸ್ ಟೊಪ್ಪಿ ಹಾಕಿದ ಆರೋಪಿಯಾಗಿದ್ದಾನೆ.

ಈ ಆರೋಪಿಯು ಗಣಪತಿಯವರಿಗೆ ಕರೆಮಾಡಿ ನಿಮಗೆ ಎಲೆಕ್ಟ್ರಾನಿಕ್ ಸ್ವತ್ತುಗಳನ್ನು ಕೊರಿಯರ್ ಗೆ ಕಳಿಸಿದ್ದೇನೆ . ನೀವು ಬ್ಯಾಂಕ್ ಖಾತೆ ಮೂಲಕ ಡ್ಯೂಟಿ ಕಸ್ಟಮ್ ಚಾರ್ಜ ಕಟ್ಟಿ ತೆಗದುಕೊಳ್ಳಿ ಎಂದಿದ್ದಾರೆ. ಅದರಂತೆ ಗಣಪತಿಯವರು ತಮ್ಮ ಖಾತೆಯಿಂದ ಕೊರಿಯರ್ ಗೆ ಹಣ ಹಾಕಿದ್ದಾರೆ. ಆದರೆ ಹಣ ಹೋಯಿತು , ಸ್ವತ್ತು ಮಾತ್ರ ಇದುವರೆಗೂ ಬಂದಿಲ್ಲವAತೆ. ಇದೀಗ ಗಣಪತಿಯವರು ಪೋಲಿಸ್ ಮೊರೆ ಹೋಗಿದ್ದಾರೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Exit mobile version