ಶಿರಸಿ: ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಘವಾಗಿರುವ ಶಿರಸಿಯ ಟಿಎಸ್ ಎಸ್ ಗೆ (TSS) ಆಡಳಿತಾಧಿಕಾರಿ ನೇಮಕ ಮಾಡಿ ಡಿಆರ್ ಕೋರ್ಟ್ ಆದೇಶ ನೀಡಿತ್ತು. ಆದರೆ ಮಂಗಳವಾರ ಈ ಆದೇಶಕ್ಕೆ ತಡೆಸಿಕ್ಕಿದ್ದು, ಹಾಲಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು. ಹೀಗಾಗಿ ಮಂಗಳವಾರ ಬೆಳಗ್ಗೆ ಟಿಎಸ್ ಎಸ್ ಆವರಣದಲ್ಲಿ ಜನವೋ ಜನ. ಎತ್ತನೋಡಿದರೂ ಪೋಲೀಸ್ ಬೀಗಿ ಬಂದೋಬಸ್ತ್. ಪೂರ್ವಸಿದ್ಧತೆ ಯಂತೆ ಟಿಎಸ್ ಎಸ್ ಸೊಸೈಟಿ ಯಿಂದ ಎಸಿ ಆಫೀಸ್ ವರೇಗೆ ಸಾವಿರಾರು ರೈತ ಸದಸ್ಯರು ಮೆರವಣಿಗೆ ಸಹ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ TSS ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ನಿಯಾಮಾವಳಿಗಳ ಪ್ರಕಾರ ಆಡಳಿತ ಮಂಡಳಿ ಚುನಾವಣೆ ನಡೆಸಿಲ್ಲ ಎಂದು ಕೆಲವು ದಿನದ ಹಿಂದೆ ಡಿಆರ್ ಕೋರ್ಟ್ ತೀರ್ಪು ನೀಡಿ ವಿಶೇಷ ಆಡಳಿತಾಧಿಕಾರಿ ಯನ್ನು ನೇಮಕಮಾಡಿತ್ತು. ಇದನ್ನು ನಾವು ಪ್ರಶ್ನಿಸಿದ್ದೇವು. ಇದೀಗ ಜಯ ಸಿಕ್ಕಿದೆ ಎಂದುರು.
ಉತ್ತರ ಕನ್ನಡ ಸಹಕಾರಿ ನಿಬಂಧಕರು ಶಿರಸಿಯ ಪ್ರಭಾವಿ ಮನೆಯಲ್ಲಿ ಕುಳಿತು ತೀರ್ಪು ನೀಡಿದ್ದಾರೆ. ಇದರ ಹಿಂದೆ ಸಾಕಷ್ಟು ಜನ ಪ್ರಭಾವಿಗಳ ಹಾಗೂ ಜನಪ್ರತಿನಿಧಿಗಳ ಕೈವಾಡವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಿಂದಿನ ಕಾರ್ಯಾಧ್ಯಕ್ಷರು ಹಾಗೂ ಪ್ರಧಾನ ವ್ಯವಸ್ಥಾಪಕರು ಸೇರಿ ಸಂಸ್ಥೇಗೆ ನೂರು ಕೋಟಿ ಗೂ ಅಧೀಕ ಅವ್ಯವಹಾರ ನಡೆಸಿದ್ದಾರೆ.ಆದನ್ನು ನಾವು ಪ್ರಶ್ನಿಸಿ ಕೇಸ್ ದಾಖಲಿಸಿದ್ದೇವೆ ಎಂದರು.
ವಿಸ್ಮಯ ನ್ಯೂಸ್, ಶಿರಸಿ