ಸಚಿವ ಮಂಕಾಳ ವೈದ್ಯರ ವಿರುದ್ಧ ಕೆಂಡಾಮಂಡಲವಾದ ಮಾಜಿ ಶಾಸಕ ಸುನಿಲ್ ನಾಯ್ಕ
ಎಕರೆಗೆಟ್ಟಲೆ ಜಾಗ ಅತಿಕ್ರಮಣ ಆಗಿದೆ ಎಂದು ಆರೋಪ
ಸಚಿವರು ತಮ್ಮ ಬಾಲಭಂಟರಿಗೆ ರಿಯಲ್ ಏಸ್ಟೇಟ್ ಉದ್ಯಮ ನಡೆಸಲು, ಅರಣ್ಯ ಇಲಾಖೆಯ ಜಾಗವನ್ನು ಅತಿಕ್ರಮಣ ಮಾಡಲು ಅವಕಾಶ ಮಾಡಿಕೊಡುತ್ತಿದ್ದಾರೆ, ನಾನು ಶಾಸಕನಿದ್ದಾಗ ಡೋಂಗಿ ರಿಯಲ್ ಏಸ್ಟೇಟ್ ಉದ್ಯಮಿಗಳ ಜತೆ ಕೈಜೋಡಿಸುವ ಕೆಲಸ ಎಂದು ಮಾಡಿರಲಿಲ್ಲ ಎಂದು ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸುನಿಲ್ ನಾಯ್ಕ ಹೇಳಿದರು.
ತಾಲೂಕಿನ ಮಣ್ಕುಳಿಯ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಾಯ್ಕಿಣಿ ಭಾಗದಲ್ಲಿ 24 ಘಂಟೆಗಳಲ್ಲಿ ಜಾಗ ಖರೀದಿಸಿ ಜಿ.ಪಿ.ಎಸ್ ಮಾಡಿಸಿ ರಸ್ತೆಯನ್ನು ಗುರುತಿಸಿ ಕೊಡುವ ಕೆಲಸವನ್ನು ಅರಣ್ಯ ಇಲಾಖೆ ಮಾಡಿದೆ ಎಂದರೆ ನಿಜಕ್ಕೂ ನಾಚಿಗೇಡಿನ ಸಂಗತಿ, ಬೀನಾ ವೈದ್ಯ ಖಾಸಗಿ ಶಾಲೆಯ ಹಿಂದುಗಡೆ ಎಕರೆಗಟ್ಟಲೆ ಜಾಗವನ್ನು ಅತಿಕ್ರಮಣ ಮಾಡಲಾಗಿದೆ. ಒತ್ತುವರಿ ಮಾಡಿದ ಜಾಗದಿಂದ ಪ್ರತಿದಿನ ಮಣ್ಣನ್ನು ತೆಗೆದು ಜಾಗವನ್ನು ವಿಸ್ತಿರರ್ಣಗೋಳಿಸಲಾಗುತ್ತಿದೆ.
ಜವಾಭ್ಧಾರಿಯುತ ಸ್ಥಾನದಲ್ಲಿರುವ ಸಚಿವರು ತಾವು ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ಒತ್ತುವರಿ ಮಾಡಿದ ಜಾಗವನ್ನು ಸರ್ಕಾರಕ್ಕೆ ಒಪ್ಪಿಸುತ್ತಾರೆ, ಅರಣ್ಯ ಇಲಾಖೆ ಆ ಜಾಗಕ್ಕೆ ಬೇಲಿಹಾಕಿ ವಶಪಡಿಸಿಕೊಳ್ಳಬಹುದು ಎಂಬ ಮನೋಭಾವನೆಯನ್ನು ನಾವು ಹೊಂದಿದ್ದೇವು. ಆ ಕಾರಣಕ್ಕಾಗಿ ನಾವು ಪಕ್ಷದ ವತಿಯಿಂದ 15 ದಿನ ಕಾಲಾವಕಾಶ ನೀಡಿದ್ದೇವೆ. ಇನ್ನೂ 15 ದಿನದೊಳಗೆ ಇಲಾಖೆ ಇತ್ತುವರಿ ಜಾಗವನ್ನು ವಶಪಡಿಸಿಕೊಳ್ಳದಿದ್ದರೆ ನಾವು ಮುಂದಿನ ಹೆಜ್ಜೆ ಇಡುವ ಕೆಲಸವನ್ನು ಮಾಡುತ್ತೆವೆ ಎಂದು ಸಚಿವರ ವಿರುದ್ಧ ಕಿಡಿಕಾರಿದರು.
ಬಿಜೆಪಿ ತಾಲೂಕಾ ಮಂಡಲಾಧ್ಯಕ್ಷರಾದ ಲಕ್ಷ್ಮೀ ನಾರಾಯಣ ನಾಯ್ಕ ಮಾತನಾಡಿ ಭಟ್ಕಳ ತಾಲೂಕಿನಲ್ಲಿ ಹಿಂಸಾತ್ಮಕವಾಗಿ ಅಕ್ರಮ ಗೋಸಾಗಾಟ ನಡೆಯುತ್ತಿದೆ. ಈ ವಿಚಾರವಾಗಿ ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಸಂಬಂಧಪಟ್ಟ ಆರಕ್ಷಕ ಠಾಣೆಯನ್ನು ಸಂಪರ್ಕಿಸಿ ವಿಚಾರವನ್ನು ತಿಳಿಸಿದರೂ ಯಾವುದೇ ರೀತಿಯ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಈಗಾಗಲೇ ಭಟ್ಕಳದಲ್ಲಿರುವ ಎಲ್ಲಾ ಚೆಕ್ ಪೋಸ್ಟ್ ಗಳು ನಿಸ್ಕ್ರೀಯವಾಗಿದೆ. ಮುಂದಿನ ದಿನಗಳಲ್ಲಿ ಪೋಲಿಸ್ ಇಲಾಖೆ ಚೆಕ್ ಪೋಸ್ಟ್ ಗಳನ್ನು ಭದ್ರಪಡಿಸದಿದ್ದರೆ ಭಾರತೀಯ ಜನತಾ ಪಾರ್ಟಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಬ್ರಹತ್ ಪ್ರತಿಭಟನೆಯನ್ನು ಕೈಗೊಳ್ಳುತ್ತಾರೆ ಎಂದು ಏಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಶ್ಚಿಮ ಘಟ್ಟ ಸಂರಕ್ಷಣೆ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ರಾಜ್ಯ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಈಶ್ವರ ನಾಯ್ಕ ,ಸುರೇಶ ನಾಯ್ಕ ಕೋಣೆಮನೆ ಇನ್ನಿತರರು ಹಾಜರಿದ್ದರು.
ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ