KCETಯಲ್ಲಿ ಕೆನರಾ ಎಕ್ಸಲೆನ್ಸ್ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಕುಮಟಾ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆಸಿದ KCETಯಲ್ಲಿ ಕುಮಟಾದ ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನ 10 ವಿದ್ಯಾರ್ಥಿಗಳು 10 ಸಾವಿರದೊಳಗಿನ Rank ಗಳನ್ನು ಗಳಿಸಿ ಅಭೂತಪೂರ್ವ ಸಾಧನೆಗೈದಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ಕುಮಾರ್. ಎಸ್. ಭಟ್ 439 ನೇ Rank, ಪೂಜಾ ಎಸ್ ಅವಧಾನಿ 2108ನೇ Rank, ದಿಶಾ ಡಿ ಮಾಸ್ತಿಕಟ್ಟಾ 2579 ನೇ Rank, ಚಿನ್ಮಯ್ ವಿ ಭಟ್ಟ 2961ನೇ Rank, ಕಾರ್ತಿಕ್ ಎಮ್ ನಾಯ್ಕ್ 4103 ನೇ Rank, ನಂದನ್ ಜಿ ಹೆಗಡೆ 5882 ನೆ Rank, ಎನ್ ಆರ್ ಶ್ರೀಕಾಂತ್ 7410ನೇ Rank, ವಿವೇಕ್ ವಿ ಭಟ್ 7506ನೇ Rank, ಸಂಜೀತ್ ಜಿ ಹೆಗಡೆ 8125 ನೇ Rank, ರೋಹನ್ ಕೆ ಗುನಗಾ 9187 ನೇ Rank ಗಳನ್ನು ಗಳಿಸಿರುತ್ತಾರೆ.

ಕೆನರಾ ಎಕ್ಸಲೆನ್ಸ್ ಕಾಲೇಜಿನ ಒಟ್ಟು 79 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಎದುರಿಸಿದ್ದು ಅವರ ಪೈಕಿ ಒಬ್ಬ ವಿದ್ಯಾರ್ಥಿ 500 ನೇ Rank ಒಳಗೆ, 5 ವಿದ್ಯಾರ್ಥಿಗಳು 5 ಸಾವಿರದ Rank ಒಳಗೆ ಹಾಗೂ 10 ವಿದ್ಯಾರ್ಥಿಗಳು 10 ಸಾವಿರದ ಒಳಗಿನ Rank ಪಡೆದುಕೊಂಡಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯ. ಈ ಎಲ್ಲಾ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಜಿ ಜಿ ಹೆಗಡೆ, ಪ್ರಾಂಶುಪಾಲರಾದ ಶ್ರೀ ಡಿ ಎನ್ ಭಟ್, ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ಪಾಲಕರು, ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Exit mobile version