Important
Trending

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಮತಎಣಿಕೆಗೆ ಬಿಗಿ ಭದ್ರತೆ: 12 ಗಂಟೆಯ ಒಳಗೆ ಸಿಗಲಿದೆ ಸ್ಪಷ್ಟ ಚಿತ್ರಣ

ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ 2024ಕ್ಕೆ ಸಂಬAಧಿಸಿದAತೆ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಮತದಾನದ ಮತ ಎಣಿಕೆ ಕಾರ್ಯವು ಜೂನ್ 4ರಂದು ಕುಮಟಾ ತಾಲೂಕಿನ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದ್ದು, ಮದ್ಯಾಹ್ನ 12 ಗಂಟೆಯ ಒಳಗಾಗಿ ಬಹುತೇಕವಾಗಿ ಅಂತಿಮ ಫಲಿತಾಂಶ ಪ್ರಕಟವಾಗಲಿದೆ ಎಂದು ಜಿಲ್ಲಾಧಿಕಾರಿಗಳಾದ ಗಂಗೂಬಾಯಿ ಮಾನ್ಕರ್ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮತ ಎಣಿಕೆಯು ಪಾರದರ್ಶಕವಾಗಿ ನಡೆಯಲು ಪ್ರತಿಯೊಂದು ಟೇಬಲ್‌ಗೂ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಮತ ಎಣಿಕೆಯನ್ನು ಸುಲಲಿತವಾಗಿ ನಡೆಸಲು ಸಿಬ್ಬಂದಿಗಳಿಗೆ ಎರಡು ಹಂತದ ತರಬೇತಿಯನ್ನು ನೀಡಲಾಗಿದೆ. ಒಟ್ಟೂ 562 ಜನ ಸಿಬ್ಬಂದಿಗಳು ಈ ಮತದಾನ ಪ್ರಕ್ರೀಯೆಯಲ್ಲಿ ಪಾಲ್ಗೊಳ್ಳಲಿದ್ದು, ಅವರು ಯಾವ ಕ್ಷೇತ್ರದ ಯಾವ ಟೇಬಲ್‌ನಲ್ಲಿ ಎಣಿಕೆ ಕಾರ್ಯ ನಡೆಸಬೇಕು ಎಂಬುದನ್ನು ರ‍್ಯಾಂಡಮೈಜೇಶನ್ ಮೂಲಕ ನೇಮಕ ಮಾಡಲಾಗುತ್ತದೆ. ಮತ ಎಣಿಕೆ ಕಾರ್ಯದ ಬಗ್ಗೆ ಎಲ್ಲಾ ಅಭ್ಯರ್ಥಿಗಳ ಅಥವಾ ಅವರ ಪರ ಏಜೆಂಟರುಗಳ ಸಭೆ ಕರೆದು ವಿವರ ನೀಡಲಾಗಿದೆ.

ಜೂನ್ 4ರ ಬೆಳಿಗ್ಗೆ 7 ಗಂಟೆಗೆ ಏಜೆಂಟರ ಸಮ್ಮುಖದಲ್ಲೇ ವಿಡಿಯೋ ಶೂಟಿಂಗ್ ಮಾಡಿ ಸ್ಟಾçಂಗ್ ರೂಂನ ಬಾಗಿಲು ತೆರೆಯಲಾಗುವುದು. ಮೊದಲು ಪೋಸ್ಟಲ್ ಬ್ಯಾಲೆಟ್ ಎಣಿಕೆ ಕಾರ್ಯ ಬೆಳಿಗ್ಗೆ 7.30 ಕ್ಕೆ ಪ್ರಾರಂಭವಾಗಲಿದೆ. ಇವಿಎಂ ಮತ ಎಣಿಕೆಯ ಕಾರ್ಯವು 8 ಗಂಟೆಯ ನಂತರ ಶುರುವಾಗಲಿದೆ ಎಂದು ಅವರು ಮಾಹಿತಿಯನ್ನು ನೀಡಿದ್ದಾರೆ. ಈ ಮತ ಎಣಿಕೆಯ ಕಾರ್ಯದ ವೀಕಣೆಗಾಗಿ ಕಾಂಗ್ರೆಸ್‌ನ 136, ಬಿಜೆಪಿಯ 141, ಎಂಇಎಸ್‌ನ 18 ಜನ ಸೇರಿ 300 ಕ್ಕೂ ಅಧಿಕ ಏಜೆಂಟರುಗಳಿಗೆ ಕೌಂಟಿAಗ್ ಪಾಸ್ ನೀಡಲಾಗಿದೆ. ಮತ ಎಣಿಕೆಯ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಪ್ರತಿ ಕ್ಷೇತ್ರಕ್ಕೆ ಒಂದರAತೆ ಸಮವಸ್ತç ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಬ್ಯೂರೋ ರಿಪೋರ್ಟ, ವಿಸ್ಮಯ ನ್ಯೂಸ್

Back to top button