40 ಅಡಿ ಆಳಕ್ಕೆ ಬಿದ್ದ ಲಾರಿ: ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆ

ಸಿದ್ದಾಪುರ: ತೆಂಗಿನ ಕಾಯಿ ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಸಿದ್ದಾಪುರ ತಾಲೂಕಿನ ಜೋಗಿನ ಮಠದ ಬಳಿ ತಿರುವಿನಲ್ಲಿ ನಡೆದಿದೆ. ಶಿವಮೊಗ್ಗ ಕಡೆಯಿಂದ ಗೋವಾಕ್ಕೆ ಹೋಗುತ್ತಿದ್ದ ಲಾರಿ ಹೊನ್ನಾವರ ಬೆಂಗಳೂರು ಮುಖ್ಯ ರಸ್ತೆಯಲ್ಲಿ ವಾಹನದಲ್ಲಿನ ತಾಂತ್ರಿಕ ದೋಷದಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ವಾಹನದಲ್ಲಿದ್ದ ಇಬ್ಬರು ಚಾಲಕರು ಸುಮಾರು 40 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದರು. ವಿಷಯ ತಿಳಿದ ಸಿದ್ದಾಪುರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪೊಲೀಸರು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಕಾರ್ಯಾಚರಣೆಯನ್ನು ಆರಂಭಿಸಿ ಚಾಲಕರನ್ನ ಸುರಕ್ಷಿತವಾಗಿ ಮೇಲಕ್ಕೆ ಎತ್ತಿದ್ದಾರೆ. ಗಾಯಾಳುಗಳನ್ನ ಚಿಕಿತ್ಸೆಗಾಗಿ ಸಾಗರ ಹಾಸ್ಪಿಟಲ್ ಗೆ ದಾಖಲಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಸಿದ್ದಾಪುರ ಅಗ್ನಿಶಾಮಕಠಾಣೆಯ ಅಧಿಕಾರಿ ಸುಬ್ರಮಣ್ಯ ಭಟ್ಟ ಹಾಗೂ ಸಿಬ್ಬಂದಿಗಳಾದ ಮಾಸ್ತಿ ಗೊಂಡ, ಆನಂದ್ ಕಿರಣಕುಮಾರ್,ಪ್ರಸಾದ ಹಾಗೂ ಶಿವರಾಜ್ ಮೋಕಾಸಿ ಪಾಲ್ಗೊಂಡಿದರು.

ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ

Exit mobile version