ಅಂಕೋಲಾ: ಪಟ್ಟಣದ ಪ್ರಮುಖ ಆಸ್ಪತ್ರೆ ಒಂದರ ಎದುರಿನ ಮುಖ್ಯ ರಸ್ತೆಯಲ್ಲಿ ಜೇನು ಹುಳುಗಳು, ರೊಚ್ಚಿಗೆದ್ದು ಜನರ ಮೇಲೆ ಏಕಾ ಏಕಿ ದಾಳಿ ಮಾಡಿದ್ದರಿಂದ, ದಾರಿಹೋಕರು, ಆಸ್ಪತ್ರೆಯಲ್ಲಿದ್ದವರು ಮತ್ತು ಅಕ್ಕ ಪಕ್ಕದವರು ಕೆಲ ಕಾಲ ಭಯ ಭೀತರಾದ ಘಟನೆ ಪಟ್ಟಣ ವ್ಯಾಪ್ತಿಯಲ್ಲಿ ಸಂಭವಿಸಿದೆ. ದಿನಕರ ದೇಸಾಯಿ ರಸ್ತೆಗೆ ಹೊಂದಿಕೊoಡಿರುವ, ಆರ್ಯ ಮೆಡಿಕಲ್ ಸೆಂಟರ್ ನ ಮೇಲ್ಮಹಡಿಯ ಹೊರ ಭಾಗದಲ್ಲಿ ಬೃಹತ್ತ ಗಾತ್ರದ ಜೇನು ಗೂಡೊಂದಿತ್ತು.
ಯಾವುದೋ ಕಾರಣಗಳಿಂದ ರೊಚ್ಚಿಗೆದ್ದ ಜೇನು ಹುಳುಗಳು, ಏಕಾ ಏಕಿ ದಾಳಿ ಮಾಡಿವೆ. ಈ ವೇಳೆ ಕೆಲವರು ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಅಲ್ಲಿ ಇಲ್ಲಿ ಒಡಾಡಿದ್ದಾರೆ. ಆದರೂ ಬೆಂಬಿಡದ ಕೆಲ ಜೇನು ಹುಳುಗಳು ಪಕ್ಕದ ನರ್ಸರಿ ಕೆಲಸಕ್ಕಿದ್ದವರು, ದಾರಿಹೋಕರಿಗೆ ಕಡಿದಿವೆ. ಅದೃಷ್ಟ ವಶಾತ್ ಯಾರಿಗೂ ಹೆಚ್ಚಿನ ಅಪಾಯವಾಗಿಲ್ಲ. ನೂರಿನ್ನೂರು ಮೀಟರ್ ದೂರದವರೆಗೆ ಜೇನು ಹುಳುಗಳು ದಾಳಿ ಮಾಡಿವೆ.
ಕೂಡಲೇ ಮುಖ್ಯದ್ವಾರ ಮುಚ್ಚಿದ ಆಸ್ಪತ್ರೆಯವರು ಸಮಯೋಚಿತ ನಿರ್ಧಾರ ತೆಗೆದುಕೊಂಡು,ಸoಭವನೀಯ ಅಪಾಯ ತಪ್ಪಿಸಿದ್ದಾರೆ.
ಬೆಳೆಗಾರರ ಸಮಿತಿ ಪ್ರಮುಖ ಮತ್ತು ಜೇನು ಸಾಕಾಣಿಕೆಯಲ್ಲಿ ಅನುಭವ ಇರುವ ರಾಮಚಂದ್ರ ಹೆಗಡೆಯವರು ,ಜೇನು ಹುಳುಗಳು ಹಾಗೆಲ್ಲ ಸುಮ್ಮನೆ ದಾಳಿ ಮಾಡುವುದಿಲ್ಲ. ಸಿಗರೇಟ್ ಇಲ್ಲವೇ ಇತರೇ ರೀತಿಯ ಹೊಗೆಯಿಂದ ಜೇನು ಹುಳುಗಳು ಕೆರಳಿರುವ ಸಾಧ್ಯತೆ ಇದೆ ಎಂದರು. ಸಂಬಧಿತ ಪುರಸಭೆ, ಅರಣ್ಯ ಇಲಾಖೆ, ಪೊಲೀಸ್ ಮತ್ತಿತರ ಇಲಾಖೆಗಳು ಹಾಗೂ ಆಸ್ವತ್ರೆಯವರು ಈ ಕುರಿತು ಗಮನಹರಿಸಿ, ಮತ್ತೆ ಅಪಾಯವಾಗುವ ಮುನ್ನ ಎಚ್ಚೆತ್ತು ಜೇನುಗೂಡು ತೆರವಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ