ಗೋಕರ್ಣ: ಇತಿಹಾಸ ಪ್ರಸಿದ್ದ ಗೋಕರ್ಣದ ಮಹಾಬಲೇಶ್ವರ ಮಂದಿರಕ್ಕೆ ಖ್ಯಾತ ಚಿತ್ರ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕುಟುಂಬ ಸಮೇತರಾಗಿ ಆಗಮಿಸಿ ಆತ್ಮಲಿಂಗದ ದರ್ಶನ ಪಡೆದು, ಪ್ರಧಾನ ಅರ್ಚಕರಾದ ವೇದಮೂರ್ತಿ ರಾಜಗೋಪಾಲ್ ಅಡಿ ಇವರ ನೇತೃತ್ವದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಮಹಾಗಣಪತಿ ಮಂದಿರದಲ್ಲಿ ಪೂಜೆ ಸಲ್ಲಿಸಿ, ತಾಮ್ರಗೌರಿ, ಸ್ಮಶಾನಕಾಳಿ ದೇವಾಲಯಕ್ಕೆ ತೆರಳಿ ದೇವಿ ದರುಶನ ಪಡೆದರು.ತದನಂತರ ಕೋಟಿತೀರ್ಥದಲ್ಲಿರುವ ದುರ್ಗಾಲಯದಲ್ಲಿ ಪಿತೃ ಕಾರ್ಯ ಮತ್ತು ದೇವತಾ ಕಾರ್ಯಗಳಲ್ಲಿ ಭಾಗಿಯಾದರು. ಆಪ್ತ ಗೆಳೆಯ ರಕ್ಷಿತ್ ಶೆಟ್ಟಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಸಲುವಾಗಿಯೂ ವಿಶೇಷ ಪ್ರಾರ್ಥನೆ ಮಾಡಲು ಹೇಳಿದ್ದೂ ಎಲ್ಲರ ಗಮನ ಸೆಳೆಯಿತು. ಈ ವೇಳೆ ಮಂದಿರದ ವ್ಯವಸ್ಥಾಪಕರು, ಸಿಬ್ಬಂದಿ ವರ್ಗದವರು, ರಿಷಬ್‌ರವರ ಪತ್ನಿ ಪ್ರಗತಿ, ಮಕ್ಕಳಾದ ರನ್ವಿತ್, ರಾಧ್ಯಾ ಮತ್ತಿತರರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್, ಗೋಕರ್ಣ