ಉತ್ತರಾಖಂಡದಲ್ಲಿ ಆದ ಹವಾಮಾನ ವೈಪರೀತ್ಯದ ವೇಳೆ ದುರಂತ: ಚಾರಣದ ವೇಳೆ ಶಿರಸಿಯ ಓರ್ವ ಯುವತಿ ಸಾವು

ಶಿರಸಿ: ಉತ್ತರಾಖಂಡದಲ್ಲಿ ಆದ ಹವಾಮಾನ ವೈಪರೀತ್ಯ ದಿಂದ ಹಿಮಪಾತವಾಗಿ ನಾಪತ್ತೆಯಾಗಿ ಮೃತಪಟ್ಟ ಚಾರಣಿಗರಲ್ಲಿ ಶಿರಸಿಯ ಓರ್ವ ಯುವತಿ ಕೂಡಾ ಸೇರಿದ್ದಾಳೆ. ತಾಲೂಕಿನ ಜಾಗನಹಳ್ಳಿಯ ಯುವತಿ ಪದ್ಮಿನಿ ಮೃತ ದುದೈವಿ ಎಂದು ತಿಳಿದುಬಂದಿದೆ, ಈಕೆ ಗೂಗಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಮೃತ ಪದ್ಮಿನಿ ಹೆಗಡೆ ಚಾರಣದಲ್ಲಿ ಆಸಕ್ತಿ ಹೊಂದಿದ್ದು, ಟ್ರೆಕ್ಕಿಂಗ್‌ಗೆ ಅನುಮತಿ ಪಡೆದ ತಂಡದೊAದಿಗೆ ಉತ್ತರಾಖಂಡ್ ಗೆ ತೆರಳಿದ್ದರು. ಜೂ. 4ರಂದು ಮಧ್ಯಾಹ್ನದ ಸಮಯಕ್ಕೆ ಹವಾಮಾನ ಸರಿಯಾಗಿಲ್ಲ ಎನ್ನುವುದಾಗಿ ಪದ್ಮಿನಿ ಅವರು ತಮ್ಮ ತಾಯಿಗೆ ಮೆಸೆಜ್ ಹಾಕಿದ್ದರಂತೆ. ಬಳಿಕ ಅವರಿಗೆ ಮಗಳು ನಾಪತ್ತೆಯಾದ ಕುರಿತು ಮಾಹಿತಿ ಸಿಕ್ಕಿದೆ.

ಪದ್ಮಿನಿ ಹೆಗಡೆ ಮೃತಪಟ್ಟಿರುವ ವಿಷಯ ತಿಳಿದು ತುಂಬಾ ನೋವಾಗಿದೆ ಎಂದು ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚಿಸಿದ್ದಾರೆ. ಈಗಾಗಲೆ ಈಕೆಯ ತಾಯಿ ಶೈಲಜಾ ಹೆಗಡೆಯವರನ್ನು ಹಾಗೂ ಕುಟುಂಬಸ್ಥರನ್ನು ಸಂಪರ್ಕಿಸಿ ಧೈರ್ಯ , ಸಾಂತ್ವನ ಹೇಳಿದ್ದೇನೆ. ಪದ್ಮಿನಿ ಅವರ ನಿಧನದ ನೋವನ್ನು ಸಹಿಸುವ ಶಕ್ತಿ ಆಕೆಯ ಕುಟುಂಬಕ್ಕೆ ದೊರೆಯಲಿ, ಪದ್ಮಿನಿ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಚಾರಣ ಸಂದರ್ಭದಲ್ಲಿ ಮೃತರಾದ ಕರ್ನಾಟಕ ಉಳಿದವರಿಗೂ ಶ್ರದ್ದಾಂಜಲಿ ಸಲ್ಲಿಸುತ್ತೇನೆ ಎಂದಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Exit mobile version