ನಾಮಧಾರಿ ಸಮಾಜದ 2023-24 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ & ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಭಟ್ಕಳ: ತಾಲೂಕಿನ ಶ್ರೀ ತಿರುಮಲ ವೆಂಕಟರಮಣ ಸಭಾಭವನದಲ್ಲಿ ಇಂದು ಶಿಕ್ಷಣ ಪ್ರೇಮಿಗಳು ಭಟ್ಕಳ, ತಾಲೂಕಾ ನಾಮಧಾರಿ ಸಮಾಜ ಭಟ್ಕಳ ಇವರು 2023-24 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಶಿಕ್ಷಣ ಪ್ರೇಮಿಗಳಾದ ಶಿವಾನಂದ ನಾಯ್ಕ. ನಾವು ಕಾಣಿಕೆ ಹುಂಡಿಯ ಪರಿಕಲ್ಪನೆಯೊಂದಿಗೆ 3 ವರ್ಷದ ಹಿಂದೆ ಈ ಕಾರ್ಯಕ್ರಮವನ್ನು ಶುರುಮಾಡಿದಾಗ ಪ್ರಥಮ ವರ್ಷದಲ್ಲಿ 30 ಶೈಕ್ಷಣಿಕ ನಿಧಿಯ ಹುಂಡಿಯಿಂದ 50,000 ರೂಪಾಯಿಯನ್ನು ಸಂಗ್ರಹಿಸಿ ಜತೆಗೆ ಸಮಾಜ ಬಾಂಧವರು ನೀಡಿದ 2 ಲಕ್ಷ ಒಟ್ಟೂಗೂಡಿಸಿ 20 ವಿದ್ಯಾರ್ಥಿಗಳಿಗೆ ತಲಾ 5000 ರೂಪಾಯಿನ್ನು ನೀಡಿದ್ದೇವು.

ಎರಡನೆ ವರ್ಷದಲ್ಲಿ 120 ಶೈಕ್ಷಣಿಕ ನಿಧಿಯ ಹುಂಡಿಯಿಂದ 1 ಲಕ್ಷ ಹಾಗೂ ಸಮಾಜ ಬಾಂಧವರಿಂದ 3.3 ಲಕ್ಷ ರೂಪಾಯಿಯನ್ನು ಸಂಗ್ರಹಿಸಿ ಅದರಲ್ಲಿ 18 ವಿದ್ಯಾರ್ಥಿಗಳಿಗೆ ತಲಾ 5000 ಒಬ್ಬ ವಿದ್ಯಾರ್ಥಿಗೆ 3000, ಇಬ್ಬರೂ ವಿದ್ಯಾರ್ಥಿಗೆ ತಲಾ 10000 ರೂಪಾಯಿ, ಒಬ್ಬ ವಿದ್ಯಾರ್ಥಿಗೆ 12000, ಎರಡು ವಿದ್ಯಾರ್ಥಿಗಳಿಗೆ 13000 ರೂಪಾಯಿಗಳನ್ನು, ಒಬ್ಬ ವಿದ್ಯಾರ್ಥಿಗೆ 18000 ನೀಡಿದ್ದೇವು, ಈ ಸಂಘಟನೆಯ ಮೂಲಕ ಮುಂದಿನ ದಿನಗಳಲ್ಲಿ ಇನ್ನೂ ಮಹತ್ತರ ಶೈಕ್ಷಣಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಅದಕ್ಕೆ ಸಮಾಜದ ಸಹಕಾರ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಶಿಕ್ಷಕರು ಹಾಗೂ ನಾಮಧಾರಿ ಸಮಾಜದ ಮಾಜಿ ಅಧ್ಯಕ್ಷರಾದ ಡಿ.ಬಿ ನಾಯ್ಕ ನಾವು ಚಿಕ್ಕವರಾಗಿದ್ದಾಗ ನಾಮಧಾರಿ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿತ್ತು. ಆಗ ನಮಗೆ ಒಂದು ಹೊತ್ತಿನ ಊಟಕ್ಕೂ ಕೊರತೆಯಿತ್ತು. ತಾಳೆಹಿಟ್ಟಿನ ಗಂಜಿಯನ್ನೇ ಕುಡಿದು ಬದುಕಬೇಕಾದ ಪರಿಸ್ಥಿತಿ ಇತ್ತು. ಈಗ ಕಾಲ ಬದಲಾಗಿದೆ ಜನರು ಆರ್ಥಿಕವಾಗಿ ಸುಧಾರಿಸಿದ್ದಾರೆ. ಎಲ್ಲಾ ಸೌಲಭ್ಯಗಳು ಇದೆ. ಜತೆಗೆ ಬಡ ವಿದ್ಯಾರ್ಥಿಗಳ ಸಹಾಯಕ್ಕಾಗಿ ಇಂತಹ ಅನೇಕ ಸಂಘಟನೆಗಳು ಕಾರ್ಯಪ್ರವೃತ್ತವಾಗಿದೆ. ಇದೆಲ್ಲದರ ಅನುಕೂಲ ಪಡೆದು ತಾವು ಉತ್ತಮವಾಗಿ ವ್ಯಾಸಾಂಗ ಮಾಡಿ ಜೀವನದಲ್ಲಿ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಾಮಧಾರಿ ಸಮಾಜದ ಅಧ್ಯಕ್ಷರಾದ ಅರುಣ್ ನಾಯ್ಕ ಮಾತನಾಡಿ. ತಾವು ಮುಂದಿನ ದಿನಗಳಲ್ಲಿ ಸಮಾಜ ನೆನಪಿಟ್ಟುಕೊಳ್ಳುವಂತಹ ಕಾಣಿಕೆಯನ್ನು ಕೊಡುವುದಾಗಿಯೂ, ಸಮಾಜದಿಂದ ಸಹಾಯವನ್ನು ಪಡೆದುಕೊಂಡ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಮಾಜಕ್ಕೆ ಏನಾದರು ಸಹಾಯ ಮಾಡಬೇಕು. ವಿದ್ಯಾರ್ಥಿಗಳು ಮೊಟ್ಟ ಮೊದಲನೆಯದಾಗಿ ತಾವು ಬೆಳೆದು ದೊಡ್ಡವರಾದ ಮೇಲೆ ನಮ್ಮನ್ನು ಕೈ ಹಿಡಿದು ಬೆಳೆಸಿದ ತಂದೆ ತಾಯಿಯನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಭಾಗವಾಗಿ ಸಮಾಜವನ್ನು ಬಲಡ್ಯಗೊಳೊಸುಬ ನಿಟ್ಟಿನಲ್ಲಿ ಶ್ರಮಿಸಿದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು ಕಾರ್ಯಕ್ರಮದಲ್ಲಿ ರಾಘವೇಂದ್ರ ನಾಯ್ಕ, ಆರ್. ಕೆ ನಾಯ್ಕ, ರವಿ ನಾಯ್ಕ, ಈರಪ್ಪ ನಾಯ್ಕ, ಭವಾನಿಶಂಕರ, ಶಿವಾನಂದ ನಾಯ್ಕ, ಕೆ.ಆರ್ ನಾಯ್ಕ, ಪಾಂಡುರಂಗ ನಾಯ್ಕ ಮತ್ತಿತರು ಇದ್ದರು. ಮಂಜುನಾಥ ನಾಯ್ಕ ಪ್ರಾರ್ಥಿಸಿದರು, ಪಾಂಡುರಂಗ ನಾಯ್ಕ ಸ್ವಾಗತಿಸಿದರು, ನಾರಾಯಣ ನಾಯ್ಕ ಮತ್ತು ಪರಮೇಶ್ವರ ನಾಯ್ಕ ನಿರ್ವಹಿಸಿದರು.

ವಿಸ್ಮಯ ಟಿವಿಗಾಗಿ ಈಶ್ವರ್ ನಾಯ್ಕ ಭಟ್ಕಳ

Exit mobile version