
3 ಜನರಿಗೆ ಹೋಂ ಐಸೋಲೇಶನ್
ಸೋಂಕಿತರ ಸಂಪರ್ಕಿತರಲ್ಲಿ ಕಾಣಿಸಿಕೊಂಡ ನಂಜು
ಅಂಕೋಲಾ : ತಾಲೂಕಿನಲ್ಲಿ ಶುಕ್ರವಾರ ಒಟ್ಟೂ 12 ಕೋವಿಡ್ ಕೇಸ್‍ಗಳು ದಾಖಲಾಗಿವೆ. ಶೆಡಗೇರಿ 9, ಹುಲಿದೇವರವಾಡ, ಶೇಡಿಕುಳಿ ಮತ್ತು ಬೇಲೇಕೇರಿ ವ್ಯಾಪ್ತಿಯಲ್ಲಿ ತಲಾ 1 ಪ್ರಕರಣ ಕಾಣಿಸಿಕೊಂಡಿದ್ದು, ಇವರೆಲ್ಲರಿಗೂ ಆಯಾ ವ್ಯಾಪ್ತಿಯ ಈ ಹಿಂದಿನ ಸೋಂಕಿತರ ಸಂಪರ್ಕದಿಂದ ಪಾಸಿಟಿವ್ ಲಕ್ಷಣಗಳು ಕಾಣಿಸಿಕೊಂಡಿರುವ ಸಾಧ್ಯತೆ ಇದೆ. ಇಂದು ಒಟ್ಟೂ 91 ಜನರ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ. 3 ಜನರನ್ನು ಹೋಂ ಐಸೋಲೇಶನ್ ಚಿಕಿತ್ಸೆಗೆ ಒಳಪಡಿಸಲಾಗಿದೆ.
ಪ್ರತ್ಯೇಕ ಮತ್ತೊಂದು ಪ್ರಕರಣದಲ್ಲಿ ಕಾರವಾರದ ಸಿವಿಲ್ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದ ತಾಲೂಕು ಮೂಲದ ವ್ಯಕ್ತಿಯೋರ್ವರಲ್ಲಿ ಪಾಸಿಟಿವ್ ಲಕ್ಷಣಗಳು ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಈ ಕುರಿತು ರಾತ್ರಿ ವೇಳೆಗೆ ಅಥವಾ ನಾಳೆ ಮುಂಜಾನೆ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಅಧಿಕೃತ ವರದಿ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
- ಊರಿನ ಜಾತ್ರೆಗೆ ಬಂದಿದ್ದ ಯುವ ಜೋಡಿ ಸಾವಿನ ಯಾತ್ರೆಗೆ ನಡೆದಿದ್ದೇಕೆ ?ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣ
- ಅಪ್ರಾಪ್ತ ಬಾಲಕಿಯನ್ನು ಮೊಬೈಲ್ ನಲ್ಲಿಯೇ ಪರಿಚಯಿಸಿಕೊಂಡ ಡಿಪ್ಲೋಮಾ ವಿದ್ಯಾರ್ಥಿ: ದೂರದೂರಿಂದ ಬಂದು ಬೀಚಿಗೆ ಕರೆದುಕೊಂಡು ಹೋಗಿ ಗರ್ಭವತಿ ಮಾಡಿದ ಭೂಪ
- 4 ಲಕ್ಷ ಮೌಲ್ಯದ ಬಂಗಾರದ ಸರ ಕಳೆದುಕೊಂಡ ಶಿಕ್ಷಕಿ: ಕರ್ತವ್ಯ ಪ್ರಜ್ಞೆ ಮೆರೆದ ಪೊಲೀಸರು
- ಕಳೆದು ಹೋದ ಕಪ್ಪು ಬಣ್ಣದ ಬ್ಯಾಗ್ : ಬ್ಯಾಗ್ಗನಲ್ಲಿದ್ದ ಏನ್ ಜಿ ಓ ಗೆ ಸೇರಿದ ಅಮೂಲ್ಯ ಕಾಗದ ಪತ್ರ ಹಾಗೂ ಪರ್ಸ್
- SBI Recruitment 2023: 868 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ:40 ಸಾವಿರ ಮಾಸಿಕ ವೇತನ