ಶಿರಸಿ: ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಆತಂಕ ಸೃಷ್ಟಿಯಾಗಿದೆ. ರೋಗವು ತೀವ್ರಗತಿಯಲ್ಲಿ ಹಬ್ಬುತ್ತಿರುವುದು ಸಹಜವಾಗಿಯೇ ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ಮೂಡ ಹತ್ತಿದೆ. ಮಳೆಯು ಜಿಲ್ಲೆಯನ್ನು ಪ್ರವೇಶಿಸಿ, ತಾಲೂಕಿನಾದ್ಯಂತ ಮಳೆ ಹಾಗೂ ಬಿಸಿಲಿನ ವಾತಾವರಣವಿದೆ. ಈ ಉಷ್ಣಾಂಶದಲ್ಲಿ ಸೊಳ್ಳೆಯ ಸಂತತಿ ವೃದ್ಧಿಯಾಗುವುದರಿಂದ ಡೆಂಗ್ಯೂ ರೋಗದ ಭೀತಿ ಜೋರಾಗಿದೆ.
ತಾಲೂಕಿನಲ್ಲಿ 53 ಡೆಂಗ್ಯೂ ರೋಗದ ಪ್ರಕರಣ ಪತ್ತೆಯಾಗಿದ್ದು, ಐವರ ರಕ್ತದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಡೆಂಗ್ಯೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿದೆ. ತಾಲೂಕಿನಲ್ಲಿ ಡೆಂಗ್ಯೂ ಶಂಕಿತ ಪ್ರಕರಣ ಕಂಡು ಬಂದಿದ್ದು, ಎಲ್ಲರಿಗು ಡೆಂಗ್ಯೂ ಎಂದು ಹೇಳಲಾಗುವುದಿಲ್ಲ.
ರೋಗದ ಲಕ್ಷಣಗಳು ಕಂಡುಬoದರೆ ಅಂತಹ ವ್ಯಕ್ತಿಗಳ ರಕ್ತದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗುತ್ತದೆ.ಕಳೆದ 2 ದಿನದಿಂದ ರೋಗದ ಪ್ರಮಾಣ ಕಡಿಮೆಯಾಗಿದ್ದು, ಜೋರಾಗಿ ಮಳೆ ಸುರಿದರೆ ರೋಗ ಹರಡುವ ಪ್ರಮಾಣ ಇನ್ನಷ್ಟು ಕಡಿಮೆಯಾಗುತ್ತದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಬ್ಯೂರೋ ರಿಪೋರ್ಟ, ವಿಸ್ಮಯ ನ್ಯೂಸ್