ಅರ್ಥಪೂರ್ಣವಾಗಿ ನಡೆದ ನೇತ್ರ ಸ್ಪಂದನ ಕಾರ್ಯಕ್ರಮ: ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಕನ್ನಡಕ ವಿತರಣೆ

ಹೊನ್ನಾವರ: ಪ್ರಭಾತನಗರದ ಬಿಆರ್‌ಸಿ ಹಾಲ್‌ನಲ್ಲಿ `ನೇತ್ರ ಸ್ಪಂದನ’ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಮ್.ಜಿ ನಾಯ್ಕ ಮಾತನಾಡಿ, ಹೆಸರು ಸೂಚಿಸೂವಂತೆ ಸ್ಪಂದನ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ ಮಾತನಾಡಿ, ಕನ್ನಡಕವನ್ನು ಸದುಪಯೋಗಪಡಿಸಿಕೊಳ್ಳಿ. ಮಕ್ಕಳಿಗೆ ಉಚಿತ ಕನ್ನಡ ಒದಗಿಸಿದ ಸಂಸ್ಥೆಗೆ ಇಲಾಖೆ ಪರವಾಗಿ ಸರ್ಕಾರಿ ಸೌಲಭ್ಯ ಪಡೆಯಲು ಅಗತ್ಯವಾದ ಆಧಾರ್ ಕಾರ್ಡ, ಆಯುಷ್ಮಾನ್ , ಬಿಪಿಎಲ್ ಕಾರ್ಡ್ ನಂತಹ ದಾಖಲೆಗಳಲ್ಲಿ ಮಕ್ಕಳ ಹೆಸರು ನೊಂದಾಯಿಸಿ. ಇಲ್ಲವಾದಲ್ಲಿ ಸೌಲಭ್ಯಗಳಿಂದ ವಂಚಿತವಾಗುವ ಸಂದರ್ಭ ಒದಗಿಬರುತ್ತದೆ ಎಂದು ಸಲಹೆ ನೀಡಿದರು.

ಆರ್‌ಬಿಎಸ್‌ಕೆ ವೈದ್ಯಾಧಿಕಾರಿ ಡಾ. ಮಂಜುನಾಥ ಕೆ ಮಾತನಾಡಿ,ಕಳೆದ ಹತ್ತು ವರ್ದಗಳಿಂದ ನೇತ್ರದೋಷವಿರುವ ಮಕ್ಕಳ ಗುರುತಿಸುತ್ತಿದ್ದೇವೆೆ. ಸರ್ಕಾರದಿಂದ ಒದಗಿಸುವ ಕನ್ನಡಕ ಒದಗಿಸಲು ಪ್ರಯತ್ನಿಸಿದ್ದರೂ, ಟೆಂಡರ್ ಗೊಂದಲದಿAದ ಸಮಸ್ಯೆಯಾಗುತ್ತಿತ್ತು. ಆ ಕನ್ನಡಕ ಸರಿಹೊಂದುತ್ತಿರಲಿಲ್ಲ.ಇತನ್ಮದ್ಯೆ ವನ್ ಸೈಟ್ ನಂತಹ ಸಂಸ್ಥೆ ಬಡಮಕ್ಕಳಿಗೆ ಕನ್ನಡಕ ಒದಗಿಸುತ್ತಿರುವ ಕಾರ್ಯ ಅಭಿನಂದನಾರ್ಹ ಎಂದರು.

ಪತ್ರಕರ್ತ ಎಚ್.ಎಂ.ಮಾರುತಿ ಮಾತನಾಡಿ, ಬದುಕಿನಲ್ಲಿ ಶಿಕ್ಷಣ ,ಆರೋಗ್ಯ ಎನ್ನುವುದು ಬಹಳ ಮಹತ್ವವಾದದ್ದು. ಶಿಕ್ಷಣ ಇಲಾಖೆಗೆ ಬಂದು ಆರೋಗ್ಯ ಸೇವೆ ನೀಡಿರುವ ಗಣಪತಿ ಹೆಗಡೆ ದಂಪತಿಗಳ ಕಾರ್ಯ ಶ್ಲಾಘನೀಯ. ಈ ಮೂಲಕ ಸ್ಪಂದನಾ ಹೆಸರಿಗೆ ತಕ್ಕಂತೆ ಸ್ಪಂದಿಸಿದೆ ಎಂದರು. ಇದೇ ವೇಳೆ, ಬಡವಿದ್ಯಾರ್ಥಿಗಳಿಗೆ ಗಣ್ಯರ ಮೂಲಕ ಉಚಿತ ಕನ್ನಡಕ ವಿತರಿಸಲಾಯಿತು. ಬಿಆರ್‌ಸಿ ಸಮನ್ವಯಾಧಿಕಾರಿ ಸೀಮಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸ್ಪಂದನ ಸೇವಾ ಟ್ರಸ್ಟ್ ಅಧ್ಯಕ್ಷ ಗಣಪತಿ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು.

ವಿಸ್ಮಯ ನ್ಯೂಸ್, ವಿವೇಶ್, ಶೇಟ್, ಹೊನ್ನಾವರ

Exit mobile version