ಬಲೆಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಗೂಬೆಯ ರಕ್ಷಣೆ

ಅಂಕೋಲಾ : ಪಟ್ಟಣದ ಗಣಪತಿ ಗಲ್ಲಿಯಲ್ಲಿರುವ ಮನೆಯೊಂದರ ಮಹಡಿಗೆ ಸುತ್ತು ಹಾಕಲಾಗಿದ್ದ ಬಲೆಯೊಂದರಲ್ಲಿ ಆಕಸ್ಮಿಕವಾಗಿ ಗೂಬೆಯೊಂದು ಸಿಲುಕಿಕೊಂಡು, ಬಲೆಯಿಂದ ಹೊರ ಬರಲಾಗದೇ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಉತ್ತರ ಕನ್ನಡ ಜಿಲ್ಲಾ ಮೀನುಮಾರಾಟ ಫೆಡರೇಷನ್ ನಿರ್ದೇಶಕ ಮತ್ತು ಸಾಮಾಜಿಕ ಕಾರ್ಯಕರ್ತ ರಾಜು ಹರಿಕಂತ್ರ ಅವರು, ಗೂಬೆ ರಕ್ಷಣಾ ಕಾರ್ಯಕ್ಕೆ ಮುಂದಾಗಿ, ಬಲೆಯಲ್ಲಿ ಸಿಲುಕಿದ್ದ ಗೂಬೆಯನ್ನು ಬಂಧ ಮುಕ್ತಗೊಳಿಸಿ, ಉಪಚರಿಸಿದ್ದಾರೆ.ಕಳೆದ 2-3 ದಿನಗಳ ಹಿಂದೆಯೇ ಅದು ಬಲೆಯಲ್ಲಿ ಸಿಲುಕಿ ಕೊಂಡಿರುವ ಸಾಧ್ಯತೆ ಇದ್ದು, ಬದುಕುಳಿಯಲು ಹೆಣಗಾಡುತ್ತ ನಿತ್ರಾಣಗೊಂಡಿತ್ತು ಎನ್ನಲಾಗಿದೆ.

Bank of Baroda Recruitment: 627 ಹುದ್ದೆಗಳಿಗೆ ನೇಮಕಾತಿ: ಪದವಿ ಆದವರು ಅರ್ಜಿ ಸಲ್ಲಿಸಿ

ನಂತರ ಆ ಗೂಬೆಯನ್ನು ರಾಜು ಅವರು, ಪಶು ವೈದ್ಯಕೀಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರಾದರೂ, ರಾತ್ರಿ ವೇಳೆಯಾಗಿದ್ದರಿಂದ,ಅಲ್ಲಿನ ಸೇವೆ ದೊರೆಯದೇ ನಿರಾಶರಾಗಿ ಮರಳಿ, ಬಳಿಕ ಅದನ್ನು ಅರಣ್ಯ ಇಲಾಖೆಯವರಿಗೆ ಹಸ್ತಾಂತರಿಸಿದ್ದು ರಾಜು ಹರಿಕಂತ್ರ ಇವರ ಪಕ್ಷಿ ದಯಾ ಗುಣಕ್ಕೆ ಸಂಬಂಧಿತ ಇಲಾಖೆ ಹಾಗೂ ಪಕ್ಷಿ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version