ಬೈಕಿಗೆ ಟ್ರ್ಯಾಕ್ಟರ್ ಬಡಿದು ರೈತ ಸಾವು: ಸ್ಥಳದಿಂದ ಪರಾರಿಯಾದ ಟ್ರ್ಯಾಕ್ಟರ್ ಚಾಲಕ

ಕುಮಟಾ: ಟ್ರ್ಯಾಕ್ಟರ್ ನ ಹಿಂದಿನ ಟ್ರಾಲಿ, ಸ್ಕೂಟರಿಗೆ ಬಡಿದು ರೈತರೊಬ್ಬರು ಸಾವನ್ನಪ್ಪಿದ ಘಟನೆ ಕುಮಟಾ ಪಟ್ಟಣದ ಮೂರೂರು ಕ್ರಾಸ್ ಬಳಿ ಸಂಭವಿಸಿದೆ. ಟ್ರ್ಯಾಕ್ಟರ್ ಚಾಲಕನೋರ್ವನ ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಅಮಾಯಕ ರೈತರೋರ್ವರು ಅಸುನೀಗಿದ್ದಾರೆ. ಅಡ್ಡದಿಡ್ಡಿಯಾಗಿ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದ ಪರಿಣಾಮ ಟ್ರಾö್ಯಕ್ಟರ್‌ನ ಹಿಂದಿನ ಟ್ರಾಲಿ ಸ್ಕೂಟರಿಗೆ ಬಡಿದಿದೆ.

ಇದರಿಂದಾಗಿ ನಿಯಂತ್ರಣ ತಪ್ಪಿದ ಬೈಕ್ ಸವಾರ ಹೊನ್ನಾವರ ತಾಲೂಕಿನ ಹೊದ್ಕೆಶಿರೂರು ನಿವಾಸಿಯಾದ ಪಾಂಡುರoಗ ದೇವರಾಯ ದೇಶಭಂಡಾರಿ ಅವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಚಾಲಕನು ತನ್ನ ಟ್ರ್ಯಾಕ್ಟರ್ ನ್ನು ಹೊನ್ನಾವರ ಕಡೆಯಿಂದ ಅಂಕೋಲಾ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ತಿರುಗಿಸಿದಾಗ ಟ್ರಾö್ಯಕ್ಟರಿನ ಹಿಂದಿನ ಟ್ರಾಲಿ ಸ್ಕೂಟರಿಗೆ ಬಡಿದು, ಈ ದುರ್ಘಟನೆ ಸಂಭವಿಸಿದೆ.

ಅಪಘಾತ ನಡೆದ ತಕ್ಷಣ ಟ್ರ್ಯಾಕ್ಟರ್ ಚಾಲಕ ತನ್ನ ಟ್ರಾö್ಯಕ್ಟರನ್ನು ಅಪಘಾತ ಸ್ಥಳದಲ್ಲಿ ನಿಲ್ಲಿಸಿದೇ ಪರಾರಿಯಾಗಿದ್ದಾನೆ. ಗಾಯಾಳು ಪಾಂಡುರoಗ ಅವರನ್ನು ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಒಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿತನ ಪತ್ತೆಗೆ ಬಲೆ ಬೀಸಿದ್ದಾರೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ, ಕುಮಟಾ

Exit mobile version