ಶವ ಸಂಸ್ಕಾರ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಬೈಕ್ ಮೇಲೆ ಮರಬಿದ್ದು ದಂಪತಿಗೆ ಗಾಯ

ಹೊನ್ನಾವರ : ತಾಲೂಕಿನ ನಗರಬಸ್ತಿಕೇರಿ ಹೊನ್ನಾವರ ಮಾರ್ಗದಲ್ಲಿ ಬೃಹತ್ ಮರವೊಂದು ಬೈಕ್ ಸವಾರರ ಮೇಲೆ ಬಿದ್ದಿದ್ದು ಅವಘಡದಲ್ಲಿ ಬೈಕ್ ಸವಾರ ಗಾಯಾಳುವಾದ ಘಟನೆ ನಡೆದಿದೆ. ತಾಲೂಕಿನ ಅನಿಲಗೋಡ ನಿವಾಸಿ, ಬೈಕ್ ಸವಾರ ಬಾಬು ನಾಯ್ಕ (52) ಗಾಯಗೊಂಡವರು. ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಅವರ ಪತ್ನಿ ಭಾಗೀರಥಿ ನಾಯ್ಕ ಅದೃಷ್ಟವಶಾತ್ ಪಾರಾಗಿದ್ದಾರೆ. ನಗರಬಸ್ತಿಕೇರಿಯಲ್ಲಿ ತಮ್ಮ ಸಂಬಂಧಿಯೊಬ್ಬರ ಶವಸಂಸ್ಕಾರಕ್ಕೆಂದು ತೆರಳಿದ ದಂಪತಿ ಬೈಕಿನಲ್ಲಿ ವಾಪಸ್ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Exit mobile version