ಅಂಕೋಲಾ: 19ರ ಹರೆಯದ ಬೈಕ್ ಸವಾರನೋರ್ವ ತನ್ನ ಮುಂದಿನಿಂದ ಹೋಗುತ್ತಿದ್ದ ಲಾರಿಯನ್ನು ಒವರ್ ಟೇಕ್ ಮಾಡುವ ಭರದಲ್ಲಿ, ಎದುರಿನಿಂದ ಬಂದ ಕಾರನ್ನು ನೋಡಿ, ಬೈಕಿನ ವೇಗ ನಿಯಂತ್ರಿಸಲಾಗದೇ,, ಸ್ಕಿಡ್ ಪಡಿಸಿ,ಲಾರಿಯ ಬಲಭಾಗದ ಡೀಸೆಲ್ ಟ್ಯಾಂಕ್ ಹತ್ತಿರ ಅಪಘಾತ ಪಡಿಸಿಕೊಂಡ ಪರಿಣಾಮ, ಗಂಭೀರ ಗಾಯ ನೋವುಗಳೊಂದಿಗೆ ಮೃತಪಟ್ಟ ಘಟನೆ ನಡೆದಿದೆ., ಬೈಕಿನ ಹಿಂಬದಿ ಸವಾರಳಾದ 17 ವರ್ಷ ಪ್ರಾಯದ ವಿದ್ಯಾರ್ಥಿನಿಗೆ ಈ ಅಪಘಾತದಿಂದ ಗಾಯ – ನೋವುಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಅಂಕೋಲಾದ ಹಿಲ್ಲೂರು ಬಳಿ ಸಂಭವಿಸಿದೆ.
ಇದನ್ನೂ ಓದಿ: ಬೃಹತ್ ನೇಮಕಾತಿ: 8 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶ: SSLC ಆದವರು ಅರ್ಜಿ ಸಲ್ಲಿಸಿ
ಗೋಕರ್ಣ ಸಮೀಪದ ಬಂಕಿಕೊಡ್ಲ ಹನೇಹಳ್ಳಿ ನಿವಾಸಿ 19 ವರ್ಷ ಪ್ರಾಯದ ಶೇಖರ ತಂದೆ ಮಂಜುನಾಥ ಆಗೇರ ಎಂಬಾತನೇ ಮೃತ ದುರ್ದೈವಿ ಬೈಕ್ ಸವಾರನಾಗಿದ್ದಾನೆ. ಈತ ತನ್ನ ಊರವಳೇ ಆದ 17 ವರ್ಷದ ವಿದ್ಯಾರ್ಥಿನಿಯೊಂದಿಗೆ ಬೈಕಿನಲ್ಲಿ ಹಿಲ್ಲೂರು ಕಡೆಯಿಂದ ಮಾದನಗೇರಿ ಕಡೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋದವನು, ಹಿಲ್ಲೂರು ಗ್ರಾಮದ ಹತ್ತಿರ ತನ್ನ ಎದುರಿನಿಂದ ಹೋಗುತ್ತಿದ್ದ ಲಾರಿ ಓವರ್ ಟೇಕ್ ಮಾಡುತ್ತಿರುವಾಗ ಎದುರುಗಡೆಯಿಂದ ಯಾವುದೋ ಕಾರ್ ವಾಹನ ಬಂದಿದ್ದನ್ನು ನೋಡಿ, ಬೈಕಿನ ವೇಗವನ್ನು ನಿಯಂತ್ರಿಸಲಾಗದೇ ಬೈಕನ್ನು ಸ್ಕಿಡ್ ಪಡಿಸಿ, ಲಾರಿಯ ಬಲಭಾಗದ ಡಿಸೆಲ್ ಟ್ಯಾಂಕ್ ಹತ್ತಿರ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದಾನೆ.
ಬೈಕಿನ ಹಿಂಬದಿ ಸವಾರಳಾದ ತನ್ನದೇ ಊರಿನ ಭೂಮಿಕಾ ಎನ್ನುವ 17 ವರ್ಷದ ವಿದ್ಯಾರ್ಥಿನಿಗೆ ಎಡಕಾಲು, ಮೈ ಮೇಲೆ ಅಲ್ಲಲ್ಲಿ ಭಾರೀ ಗಾಯ ನೋವು ಪಡಿಸಿದ ಬಗ್ಗೆ ಹಿಲ್ಲೂರಿನ ಸ್ಥಳೀಯ ನಿವಾಸಿಯೋರ್ವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪಿ ಎಸ್ ಐ ಜಯಶ್ರೀ ಪ್ರಭಾಕರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಪಿಐ ಶ್ರೀಕಾಂತ ತೋಟಗಿ ಸ್ಥಳ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ. ಪೊಲೀಸ್ ಉಪಾಧೀಕ್ಷಕರಾದ ಅಶ್ವಿನಿ ಇವರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಹಾರಾಷ್ಟ್ರದಿಂದ ಕೇರಳ ಕಡೆ ಈರುಳ್ಳಿ ಸಾಗಿಸುತ್ತಿತ್ತು ಎನ್ನಲಾದ ಗೋವಾ ನೋಂದಣಿ ಸಂಖ್ಯೆ ಹೊಂದಿರುವ ಭಾರೀ ಲಾರಿ ಮಾಲಕ ಕಮ್ ಚಾಲಕ ಮತ್ತು ಎದುರಿನಿಂದ ಬರುತ್ತಿದ್ದ ಕಾರು ಚಾಲಕ ಇವರೀರ್ವರೂ ಸಮಯ ಪ್ರಜ್ಞೆ ತೋರದಿದ್ದರೆ ಅಪಘಾತದ ತೀವ್ರತೆ ಇನ್ನಷ್ಟು ಹೆಚ್ಚಿ ಹಿಂಬದಿ ಸವಾರಳ ಪ್ರಾಣಕ್ಕೂ ಅಪಾಯದ ಸಾಧ್ಯತೆ ಇತ್ತು ಎನ್ನುತ್ತಾರೆ ಕೆಲ ಸ್ಥಳೀಯರು.
ಅಪಘಾತ ಗೊಂಡ ತಕ್ಷಣ ಸ್ಥಳೀಯರು,ಗಾಯಾಳುಗಳ ರಕ್ಷಣೆಗೆ ಮುಂದಾಗಿದ್ದಾರೆ. ಬಿ ಎಸ್ ಎನ್ ಎಲ್ ಮೊಬೈಲ್ ನೆಟವರ್ಕ್ ಸಮಸ್ಯೆಯಿಂದ ತಕ್ಷಣಕ್ಕೆ ಪೊಲೀಸ್ ಮತ್ತು ಆಂಬುಲೆನ್ಸ್ ಸಂಪರ್ಕ ಸಾಧಿಸಲು ಸಾಧ್ಯವಾಗದೇ, ತಾಸಿಗೂ ಹೆಚ್ಚು ಕಾಲ ಸ್ಥಳೀಯರು ಪರಿತಪಿಸುವಂತಾಯಿತು ಎನ್ನಲಾಗಿದೆ. ಈ ವೇಳೆ ಬಹು ದೂರದವರೆಗೆ ರಸ್ತೆಯ ಎರಡು ಕಡೆ ವಾಹನಗಳು ಸಾಲುಗಟ್ಟಿ ನಿಂತಿದ್ದವು .
112 ತುರ್ತು ವಾಹನ ಸಿಬ್ಬಂದಿಗಳು, ಅಂಕೋಲಾ ಪಿಎಸ್ಐ ಉದ್ದಪ್ಪ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ,ಸ್ಥಳೀಯರ ಸಹಕಾರದಲ್ಲಿ ಇತರೆ ವಾಹನಗಳ ಸುಗಮ ಸಂಚಾರಕ್ಕೆ ಅನು ಮಾಡಿಕೊಟ್ಟರು.ಗೋಕರ್ಣ ಇಲ್ಲವೇ ಕುಮಟಾ ವ್ಯಾಪ್ತಿಯ ಅಂಬುಲೆನ್ಸ್ ಸಿಬ್ಬಂದಿಗಳು, ಬೈಕ್ ಸವಾರ ಮತ್ತು ಗಾಯಾಳುವಾಗಿದ್ದ ಹಿಂಬದಿ ಸವಾರನನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಮಳೆಗಾಲ,ವಿದ್ಯುತ್ ಸಮಸ್ಯೆ ಮತ್ತಿತರ ಕಾರಣಗಳಿಂದ ಕಳೆದ ಕೆಲ ದಿನಗಳಿಂದ,ಗುಡ್ಡಗಾಡು ಪ್ರದೇಶವಾಗಿರುವ ಹಿಲ್ಲೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ,ಬಿ ಎಸ್ ಎನ್ಎಲ್ ಟವರ್ ಸಿಗ್ನಲ್ ಸರಿಯಾಗಿ ಸಿಗದೇ,ತುರ್ತು ಸಂದರ್ಭಗಳಲ್ಲಿ ಸಂಪರ್ಕ ಸಾಧಿಸಲು ಜನರು ತೀವ್ರ ಸಮಸ್ಯೆ ಎದುರಿಸುವಂತಾಗಿದ್ದು, ಈ ಕುರಿತೂ ಸಂಭದಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ