ಯುವಕ ಅಕಾಲಿಕ ವಿಧಿವಶ: ಆಕಸ್ಮಿಕವಾಗಿ ಕಾಡಿದ ಅನಾರೋಗ್ಯ ಸಮಸ್ಯೆಯೇನು ?

ಅಂಕೋಲಾ : ಭಾವಿಕೇರಿಯ ಪ್ರತಿಷ್ಠಿತ ರಾಮ ಭಟ್ಟ ಕುಟುಂಬದ ಕುಡಿಯಾಗಿದ್ದ ಹರಿರಾಮ ಗೋಪಾಲ ಭಟ್ಟ (35),ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗೆ ಆಕಸ್ಮಿಕವಾಗಿ ಇವರಲ್ಲಿ ಅಲ್ಪ ಪ್ರಮಾಣದ ಜ್ವರ ಲಕ್ಷಣಗಳು ಕಾಣಿಸಿಕೊಂಡಿತ್ತು ಎನ್ನಲಾಗಿದ್ದು,ಪಟ್ಟಣದ ದಿನಕರ ದೇಸಾಯಿ ರಸ್ತೆಗೆ ಹೊಂದಿಕೊಂಡಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಂತರ ಅಲ್ಲಿ ಪೇಟ್ಲೆಟ್ ಕೊರತೆಯಿಂದ ಡೆಂಗ್ಯೂ ಲಕ್ಷಣ ಕಾಣಿಸಿಕೊಂಡು, ಚಿಕಿತ್ಸೆಯಿಂದ ಪ್ಲೇಟ್ಲೆಟ್ ಸಂಖ್ಯೆ ಏರಿಕೆಯಾಗಿ ಆರೋಗ್ಯ ಚೇತರಿಕೆ ಆಗಬಹುದೆಂದು ನಿರೀಕ್ಷಿಸಲಾಗಿತ್ತು ಎನ್ನಲಾಗಿದೆ, ಈ ನಡುವೆ ರಕ್ತದೊತ್ತಡ ವಿಪರೀತ ಏರಿಕೆ ಮತ್ತಿತರ ಕಾರಣಗಳಿಂದ,ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ,ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಬಹು ಅಂಗಾಂಗ ವೈಫಲ್ಯ ಮತ್ತಿತರ ಕಾರಣಗಳಿಂದ ಕೊನೆಯುಸಿರೆಳೆದಿದ್ದು, ಸಾವಿಗೆ ನಿಖರ ಕಾರಣಗಳು ತಿಳಿದು ಬರಬೇಕಿದೆ.

ತನ್ನ ಸರಳ ನಡೆ ನುಡಿಗಳಿಂದ ಗ್ರಾಮದ ಹಾಗೂ ಸುತ್ತಮುತ್ತಲ ಇತರ ಎಲ್ಲರೊಡನೆ ಆತ್ಮೀಯತೆಯಿಂದ ಬಾಳಿ ಬದುಕಿದ್ದ ಈ ಸುರದ್ರೂಪಿ ತರುಣನ ಅಕಾಲಿಕ ನಿಧನದ ಸುದ್ದಿ ಬರ ಸಿಡಿಲಿನಂತೆ ಕೇಳಿ ಬಂದಿದ್ದು, ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಮೃತರು, ಪುಟಾಣಿ ಮಗು, ಹೆಂಡತಿ ಸೇರಿದಂತೆ ಅಪಾರ ಬಂಧು ಬಳಗ ತೊರಿದಿದ್ದು,ಅವರ ಕುಟುಂಬ ಶೋಕ ಸಾಗರದಲ್ಲಿ ಮುಳುಗುವಂತಾಗಿದೆ. ಹರಿರಾಮ ಭಟ್ಟ ಅಕಾಲಿಕ ನಿಧನಕ್ಕೆ, ಶಾಸಕ ಸತೀಶ ಸೈಲ್ ಸೇರಿದಂತೆ ತಾಲೂಕಿನ ಹಾಗೂ ಜಿಲ್ಲೆಯ ಹಲವು ಗಣ್ಯರು, ದಿ.ರಾಮ ಭಟ್ಟ ಮತ್ತು ಮಾಜಿ ಶಾಸಕ ದಿ.ಉಮೇಶ ಭಟ್ಟ ಕುಟುಂಬದ ಆಪ್ತರು ಹಿತೈಷಿಗಳು, ಇತರೆ ಪ್ರಮುಖರು ತೀವ್ರ ಸಂತಾಪ ಸೂಚಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version