ರಸ್ತೆ ಮೇಲೆ ಮಳೆ ನೀರು ನಿಂತು ತೊಂದರೆ: ಸಾರ್ವಜನಿಕರ ಆಕ್ರೋಶ

ಸಿದ್ದಾಪುರ: ರಸ್ತೆಯ ಎರಡೂ ಬದಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಮಳೆಯ ನೀರು ಮಣ್ಣು ರಸ್ತೆ ಮೇಲೆ ಹರಿದು ಕೊರಕಲು ಬಿದ್ದು ವಾಹನ ಸಂಚಾರ ಕ್ಕೆ ಅಡಚಣೆ ಉಂಟಾಗುತ್ತಿದೆ. ಹೀಗಾಗಿ ಕೂಡಲೇ ರಸ್ತೆ ದುರಸ್ಥಿ ಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಜಾಗಣೆ, ಜುಮನೆಕಾನ, ಲಕ್ಕಿಜಡ್ಡಿ, ವರಗದ್ದೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇಲ್ಲಿನ ರೈತರು ಸರಕು ಸಾಗಣೆ ಮಾಡಲು ಮತ್ತು ಕೃಷಿ ಉಪಕರಣ ವಸ್ತುಗಳನ್ನು ತರಲು ಸಮಸ್ಯೆಯಾಗಿದೆ. ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರು ಬಿದ್ದು ಗಾಯ ಮಾಡಿಕೊಂಡಿರುವ ಘಟನೆಗಳು ನಡೆದಿವೆ. ಇಟಗಿ ಹಾಗೂ ಕ್ಯಾದಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿಭಾಗವಾಗಿರುವುದರಿಂದ ಇದು ನಿರ್ಲಕ್ಷಕ್ಕೆ ಒಳಗಾಗಿದೆ . ಕೂಡಲೆ ರಸ್ತೆ ದುರಸ್ತಿ ಗೊಳಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.

“ಇಲ್ಲಿನ ಜನನ ಪರಿಸ್ಥಿತಿ ಹೇಗಿದೆ ಅಂದರೆ ಮಳೆಗಾಲದ ಮೂರು ತಿಂಗಳು ಕಳೆಯುವುದು ನರಕಾಯತನೇ ಅನುಭವಿಸಿದಂತೆ ಆಗುತ್ತದೆ, ಅಧಿಕಾರಿಗಳು ಜನಪ್ರತಿನಿಧಿಗಳು 1- 2 ತಿಂಗಳು ಈ ಗ್ರಾಮದಲ್ಲಿ ವಾಸ್ತವ್ಯ ಮಾಡಲಿ ಅವರಿಗೆ ಬೇಕಾದ ವ್ಯವಸ್ಥೆಯನ್ನು ನಾವು ಮಾಡುತ್ತೇವೆ ಆಗ ಅವರಿಗೆ ಇಲ್ಲಿನ ಜನರ ಪರಿಸ್ಥಿತಿ ಅರ್ಥವಾಗುತ್ತದೆ ,

ಇಲ್ಲಿ ನೆಟ್ವರ್ಕ್ ವ್ಯವಸ್ಥೆ ಇಲ್ಲ, ರಸ್ತೆಗಳು ಸರಿ ಇಲ್ಲಾ ಆರೋಗ್ಯ ಸಮಸ್ಯೆ ಉಂಟಾದರೆ ಆಸ್ಪತ್ರೆ ತಲುಪುವುದೇ ಬಲು ಕಷ್ಟವಾಗಿದೆ, ಇಂತಹ ಡಿಜಿಟಲ್ ಯುಗದಲ್ಲೂ ಕುಗ್ರಾಮಗಳು ಅಭಿವೃದ್ಧಿ ಆಗದೆ ಇರುವುದು ಬೇಸರದ ಸಂಗತಿ ಎಂದು ರಾಜು ತಿಮ್ಮ ನಾಯ್ಕ ಜುಮನೆ ಕಾನ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪಾರ್ವತಿ ನಾಯ್ಕ, ನವೀನ, ಪ್ರಮೋದ ಮುಂತಾದವರು ತಮ್ಮ ಊರಿಗೆ ಉಂಟಾದ ರಸ್ತೆ ಸಮಸ್ಯೆ ಕುರಿತು ಹೇಳಿಕೊಂಡರು.

ವಿಸ್ಮಯ ನ್ಯೂಸ್ ದಿವಾಕರ್ ಸಂಪಖoಡ ಸಿದ್ದಾಪುರ

Exit mobile version