ಭಟ್ಕಳ ಮಲ್ಲಿಗೆಗೆ ಬ್ರ್ಯಾಂಡ್ ಕಲ್ಪಿಸಿಕೊಡಿ: ಡಾ. ಜಿ.ಜಿ ಹೆಗಡೆ

ಭಟ್ಕಳ ಮಲ್ಲಿಗೆಗೆ ಅಂತರಾಷ್ಟ್ರೀಯ ಬ್ರಾಂಡ್ ಸಿಗುವ ನಿಟ್ಟಿನಲ್ಲಿ ಸಂಸದರು ಪ್ರಯತ್ನಿಸಬೇಕು, ಮುಂದಿನ ಸಲ ಪ್ರಧಾನಿ‌ ಮೋದಿಯವರನ್ನು ಬೇಟಿಯಾಗಲೂ ಅವಕಾಶ ಸಿಕ್ಕಾಗ ಮೋದಿಜಿಯವರಿಗೆ ಮಲ್ಲಿಗೆ ಹಾರವನ್ನು ಹಾಕಿ ಭಟ್ಕಳ ಮಲ್ಲಿಗೆಯ ಮಹತ್ವವನ್ನು ತಿಳಿಹೇಳಬೇಕು ಎಂದು ಜಿ.ಜಿ ಹೆಗಡೆ. ಆ ಮೂಲಕ ಮಲ್ಲಿಗೆ ಬೆಳೆಗಾರರಿಗೆ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಎಂದು ಸಂಸತ್ ಚುನಾವಣೆಯ ಬಿಜೆಪಿ ಭಟ್ಕಳ ತಾಲೂಕಿನ ಪ್ರಭಾರಿಯಾದ ಡಾ. ಜಿ.ಜಿ ಹೆಗಡೆ ಹೇಳಿದರು.

ಭಟ್ಕಳ ತಾಲೂಕಿನ ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ಸಭಾಭವನದಲ್ಲಿ ನಡೆದ ನೂತನ ಸಂಸದರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಟ್ಕಳದಾದ್ಯಂತ ಮೀನುಗಾರಿ ಚಟುವಟಿಕೆ ಹೆಚ್ಚಾಗಿ ನಡೆಯುತ್ತಿದ್ದು ಮತ್ಸೋಧ್ಯಮದ ಅಭಿವೃದ್ಧಿಗಾಗಿ ಸಂಸದರು ಶ್ರಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಶಿವಾನಂದ ನಾಯ್ಕ, ನೂತನ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಗೊವಿಂದ ನಾಯ್ಕ, ರಾಜ್ಯ ಹಿಂದುಳಿದ ಮೋರ್ಚಾದ ಉಪಾಧ್ಯಕ್ಷರಾದ ಈಶ್ವರ್ ನಾಯ್ಕ, ಜೆ.ಡಿ.ಎಸ್ ಪಕ್ಷದ ತಾಲೂಕಾ ಅಧ್ಯಕ್ಷ ಈಶ್ವರ ನಾಯ್ಕ, ಮಾಜಿ ಶಾಸಕರಾದ ಸುನಿಲ್. ಬಿ.ನಾಯ್ಕ, ಜಿಲ್ಲಾ ಅಧ್ಯಕ್ಷ ಎನ್.ಎಸ್ ಹೆಗಡೆ, ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷೆ ಶಿವಾನಿ ಶಾಂತರಾಮ ಮತ್ತಿತರರು ಹಾಜರಿದ್ದರು.

ವಿಸ್ಮಯ ನ್ಯೂಸ್, ಈಶ್ವರ್ ನಾಯ್ಕ, ಭಟ್ಕಳ

Exit mobile version