Follow Us On

Google News
Focus News
Trending

ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ: ಶಾಸಕ ದಿನಕರ ಶೆಟ್ಟಿ ಆರೋಪ

ಕುಮಟಾ: 1962 ಕೆಟಿಸಿಪಿ ಆ್ಯಕ್ಟ್ ನಿಯಮಾವಳಿಗಳ ಪ್ರಕಾರ ನಿವೇಶನಗಳನ್ನು ನೀಡಲು ವಿಶೇಷವಾದ ಸಾಧನೆ ಅಥವಾ ಕರ್ನಾಟಕದಲ್ಲಿ ಯಾವುದಾದರೂ ವಿಶೇಷವಾದಂತಹ ಸ್ಥಾನಮಾನಗಳನ್ನು ಪಡೆದುಕೊಂಡಿರಬೇಕು. ಆದರೆ ಪಾರ್ವತಮ್ಮ ಸಿದ್ದರಾಮಯ್ಯನವರು ಈ ಯಾವುದಕ್ಕೂ ಅರ್ಹರಲ್ಲದವರು. ಅವರಿಗೂ ಸಹ ನಿವೇಶನಗಳನ್ನು ನೀಡಿರುವುದು ಬಹಳ ದೊಡ್ಡ ಬ್ರಷ್ಟಾಚಾರ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ಕುಮಟಾ ಬಿಜೆಪಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಈ ಹಿಂದೆ 2011ರಲ್ಲಿ ಬಳ್ಳಾರಿಯವರೆಗೂ ಪಾದಯಾತ್ರೆ ಮಾಡಿ ನಾವು ಬ್ರಷ್ಟಾಚಾರವನ್ನು ವಿರೋದಿಸುತ್ತೇನೆ ಎಂದು ಸಿದ್ದರಾಮಯ್ಯನವರು ಹೇಳಿದ್ದರು. ಆದರೆ ಈಗ ನಾವು ಯಾರಿಗೆ ಹೇಳಬೇಕೆಂಬುದು ತಿಳಿಯದಾಗಿದೆ. ವಾಲ್ಮಿಕಿ ನಿಗಮದ ಪರಿಶಿಷ್ಟ ಪಂಗಡದ ನಿಗಮದಲ್ಲಿ 187ಕೋಟಿ ಹಗರಣವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಈ ಕುರಿತು ನಮ್ಮ ಪಕ್ಷದವರು, ಜೆಡಿಎಸ್ ಪಕ್ಷದ ಸಹಕಾರದೊಂದಿಗೆ ವಿಧಾನಸಭೆಯಲ್ಲಿ ಹೋರಾಟವನ್ನು ಮಾಡಿ ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸುವಂತಹ ಕೆಲಸವನ್ನು ಮಾಡುತ್ತದೆ ಎಂದರು.

ಮೊದಲಿನಿoದ ಕೊನೆಯವರೆಗೂ ಕಾಂಗ್ರೆಸ್ ಸರ್ಕಾರ ಬ್ರಷ್ಟಾಚಾರವನ್ನು ಮಾಡುತ್ತಾ ಬಂದಿದೆ. ಸರ್ಕಾರವೂ ಸಂಪೂರ್ಣ ದಿವಾಳಿಯಾಗಿದೆ. ಚುನಾವಣೆಯ ಪೂರ್ವದಲ್ಲಿ ಗೃಹಲಕ್ಷಿ ಮೂರು ತಿಂಗಳಿನ ಹಣವು ಒಮ್ಮೆಲೆ ನೀಡಿದ್ದರು. ಆದರೆ ಈಗ ಮೂರು ತಿಂಗಳಿoದ ಬಂದಿಲ್ಲ. ಅಕ್ಕಿಯ ಬದಲಿಗೆ ಹಣವನ್ನು ನೀಡುತ್ತೇನೆ ಎಂದಿದ್ದವರು . ಆ ಹಣವನ್ನು ಸಹ ನೀಡಿಲ್ಲ. ಅಭಿವೃದ್ದಿಯು ಸಹ ಒಂದು ವರ್ಷದಿಂದ ಶೂನ್ಯವಾಗಿದೆ. ವಿಶೇಷವಾಗಿ ಶಾಲೆಗಳ ದುರಸ್ಥಿಕಾರ್ಯವನ್ನು ಮಾಡಲು ಹಣವನ್ನು ನೀಡಿಲ್ಲ . ನಮ್ಮ ಸರ್ಕಾರ ಇದ್ದಾಗ ನಗರ ಮತ್ತು ಗ್ರಾಮೀಣ ಪ್ರದೇಶದ ರಸ್ತೆಗಳನ್ನು 80% ರಷ್ಟು ಮಾಡಿದ್ದೆವು. ರಸ್ತೆಗಳು ಸಹ ಆಗುತ್ತಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಕಿಡಿಕಾರಿದರು.

ಈ ಸಂಧರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷರಾದ ಜಿ.ಆಯ್.ಹೆಗಡೆ, ನಿಕಟಪೂರ್ವ ಅಧ್ಯಕ್ಷರಾದ ವೇಂಕಟೇಶ ನಾಯ್ಕ, ಪ್ರಶಾಂತ ನಾಯ್ಕ, ಮಂಡಳದ ಉಪಾಧ್ಯಕ್ಷರಾದ ಮೋಹಿನಿ ಗೌಡ, ಮಹಿಳಾ ಮೋರ್ಚಾದ ಅಧ್ಯಕ್ಷರಾದ ಜಯಾಶೇಟ್, ಸಂತೋಷ ನಾಯ್ಕ ಸೇರಿದಂತೆ ಪಕ್ಷದ ಪ್ರಮುಖರು ಹಾಜರಿದ್ದರು.

ವಿಸ್ಮಯ ನ್ಯೂಸ್, ನಾಗೇಶ ದೀವಗಿ, ಕುಮಟಾ

Back to top button