ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಮಾರುಕಟ್ಟೆಗೆ ಬಂದಿದ್ದ 30 ಕೆ.ಜಿ ತೂಕದ ಬೃಹತ್ ಕಟ್ಲಾ ಮೀನೊಂದು ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಅತ್ಯಂತ ದೊಡ್ಡ ಕಟ್ಲಾಮೀನಿಗೆ ಬಹಳಷ್ಟು ಬೇಡಿಕೆ ಇದ್ದು, ಸಿಹಿ ನೀರಿನ ಮೀನಿನಖಾದ್ಯ ಇಷ್ಟಪಡುವ ಮೀನುಪ್ರಿಯರು ಮುಗಿಬಿದ್ದು ಈ ಮೀನನ್ನು ಖರೀದಿಸುತ್ತಾರಂತೆ! ಅಲ್ಲದೆ, ಇಷ್ಟು ದೊಡ್ಡ ಮೀನಿನಲ್ಲಿ ಮುಳ್ಳಿನ ಪ್ರಮಾಣ ಇರುವುದಿಲ್ಲವಂತೆ. ಹೀಗಾಗಿ ಇದಕ್ಕೆ ಬಹಳ ಬೇಡಿಕೆ ಇದೆ ಎನ್ನುತ್ತಾರೆ ವ್ಯಾಪಾರಸ್ಥರು.
ವಿಸ್ಮಯ ನ್ಯೂಸ್, ಯಲ್ಲಾಪುರ