ಹೊನ್ನಾವರ: ಬಂಡೆಗಲ್ಲು ಮಧ್ಯದಿಂದ ಹಾಲ್ನೋರೆಯಂತೆ ದುಮ್ಮಿಕ್ಕುವ ಈ ( Apsarakonda Falls) ಜಲಪಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತಿದೆ. ಈ ಜಲಪಾತವನ್ನು ನೋಡಲು ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಅದರಲ್ಲೂ ವಿಕೇಂಡ್ ಬಂತೆoದರೇ ಜನಸಾಗರೇ ಹರಿದುಬರುತ್ತಿದೆ.
ಉತ್ತರಕನ್ನಡ ಜಲಪಾತಗಳ ಜಿಲ್ಲೆ ಅಂತಾನೇ ಫೇಮಸ್. ಸಾಕಷ್ಟು ಜಲಪಾತಗಳು ಇಲ್ಲಿವೆ. ಇದು ಹೊನ್ನಾವರ ತಾಲ್ಲೂಕಿನಲ್ಲಿರುವ ಅಪ್ಸರಕೊಂಡ ಫಾಲ್ಸ್ ( Apsarakonda Falls) .. ಈ ಜಲಪಾತ ಮೈದುಂಬಿ ಹರಿಯುವ ದ್ರಶ್ಯ ನೋಡುವುದೇ ಒಂದು ಸೊಬಗು.. ಇಲ್ಲಿನ ಜಲಪಾತಕ್ಕೆ ಅಪ್ಸರೆಯರು ಸ್ನಾನಕ್ಕೆ ಬರೋತ್ತಿದ್ದರಂತೆ. ಹಾಗಾಗಿ ಈ ಜಲಪಾತಕ್ಕೆ ಅಪ್ಸರಕೊಂಡ ಜಲಪಾತ ಅನ್ನೋ ಹೆಸರು ಬಂತು ಎನ್ನುವುದು ಪ್ರತೀತಿ. ಇಲ್ಲಿ ಒಂದು ಕಡೆ ಅರಬ್ಬಿ ಸಮುದ್ರ ಇನ್ನೊಂದು ಕಡೆ ಜಲಪಾತ. ಇಂತಹ ಸ್ಥಳ ಸಿಗೋದು ಸಹ ತುಂಬ ಅಪರೂಪ. ಪ್ರವಾಸಿಗರು ಸಮುದ್ರ ಸ್ನಾನ ಮಾಡಿ ನಂತರ ಈ ಅಪ್ಸರಕೊಂಡ ಜಲಪಾತದ ಸ್ನಾನಕ್ಕೆ ಬರೋದು ಒಂದು ಟ್ರೆಂಡ್ ಆಗ್ಬಿಟ್ಟಿದೆ.
ಅಪ್ಸರಕೊಂಡ ಜಲಪಾತದ ಪಕ್ಕದಲ್ಲೇ ಶ್ರೀ ಉಮಾಂಬಾ ಮಹಾಗಣಪತಿ ಮತ್ತು ನರಸಿಂಹ ದೇವರ ದೇವಸ್ಥಾನ ಕಾಣಬಹುದಾಗಿದೆ. ಮಳೆಗಾಲದಲ್ಲಿ ಹೆಚ್ಚಿನ ಜನ ಈ ಜಲಪಾತಕ್ಕೆ ನೋಡ್ಲಿಕ್ಕೆ ಬರ್ತಾರೆ. ಈ ಜಲಪಾತ ಹೊಂದಿಕೊoಡಿರುವ ಮರೀನಾ ಪಾರ್ಕ ಪ್ರವಾಸಿಗರನ್ನು ಕೈಬೀಸಿ ಕರೆಯುವಂತಿದೆ. ಇಲ್ಲಿನ ಪ್ರಕೃತಿ ಸೌಂದರ್ಯ ಹಚ್ಚಹಸಿರಿನಿಂದ ಕೂಡಿದ್ದು, ನೋಡಿಗರಂತೂ ರಮಣೀಯ ದ್ರಶ್ಯ.
ಪ್ರವಾಸಿಗರಾದ ರಾಘವೇಂದ್ರ ಮಾತನಾಡಿ ಅಪ್ಸರಕೊಂಡಕ್ಕೆ ನಾನು ಬರತ್ತಾ ಇರ್ತಿನಿ. ಈ ಫಾಲ್ಸ್ ನಂಗೆ ತುಂಬ ಇಷ್ಟ. ಭಾರತದ ಬೇರೆ ಬೇರೆ ಕಡೆಯಿಂದ ಜನ ಈ ಫಾಲ್ಸ್ ನೋಡ್ಲಿಕ್ಕೆ ಬರ್ತಾರೆ ಎಂದು ಹೇಳಿದರು, ಈ ಜಲಪಾತದ ಸೌಂದರ್ಯವನ್ನು ನೋಡಲು ಬೇರೆ ಬೇರೆ ರಾಜ್ಯಗಳಿಂದ ಪ್ರವಾಸಿಗರು ಸರ್ವೇ-ಸಾಮಾನ್ಯವಾಗಿಟ್ಟಿದೆ. ಇದರ ಜೊತೆಗೆ ಪ್ರಕೃತಿಯನ್ನು ಹಾಳು ಮಾಡದೇ ಕಸಕಡ್ಡಿ, ಪ್ಲಾಸ್ಟಿಕ ತ್ಯಾಜ್ಯವನ್ನು ಬಿಸಾಕದೇ ಸ್ವಚ್ಚವಾಗಿರಿಸುವುದು ನಮ್ಮೆಲ್ಲರ ಕತ್ಯರ್ವವು ಹೌದು.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ