Post Office Recruitment: ಅಂಚೆ ಇಲಾಖೆಯಲ್ಲಿ 44 ಸಾವಿರ ನೇಮಕಾತಿ: SSLC ಆದವರು ಅರ್ಜಿ ಸಲ್ಲಿಸಿ

ಭಾರತೀಯ ಅಂಚೆ ಇಲಾಖೆಯಲ್ಲಿ ( Post Office Recruitment) ಬೃಹತ್ ನೇಮಕಾತಿ ನಡೆಯಲಿದೆ. ಅಂಚೆ ಇಲಾಖೆಯು ಒಟ್ಟು 44 ಸಾವಿರ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಿದೆ. ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಆರಂಭಿಕ ಮಾಸಿಕ ವೇತನ 29 ಸಾವಿರದ ವರೆಗೆ ಇರಲಿದೆ. ಎಸ್‌ಎಸ್‌ಎಲ್‌ಸಿ ಆದವರು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಗಸ್ಟ್ 05, 2024 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ಇನ್ನು ಹೆಚ್ಚಿನ ಉದ್ಯೋಗಾವಕಾಶ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Post Office Recruitment: ಕರ್ನಾಟಕ ಅಂಚೆ ವೃತ್ತ ಇಲಾಖೆ ವತಿಯಿಂದ ಒಟ್ಟು 1,940 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅಧಿಸೂಚನೆಯ ಪ್ರಕಾರ, ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 40 ವರ್ಷಗಳ ವಯೋಮಿತಿ ನಿಗದಿಯಾಗಿದೆ. ಮೆರಿಟ್ ಪಟ್ಟಿ ಮತ್ತು ದಾಖಲೆ ಪರಿಶೀಲನೆ ಹಾಗು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಒಟ್ಟು ಹುದ್ದೆಗಳು44,228
ಕರ್ನಾಟಕ ವಿಭಾಗ1,940
ಖಾಲಿ ಹುದ್ದೆಗಳುಶಾಖೆ ಪೋಸ್ಟ್ ಮಾಸ್ಟರ್, ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್
ಅರ್ಜಿ ಸಲ್ಲಿಸುವ ವಿಧಾನOnline

ಶಾಖೆ ಪೋಸ್ಟ್ ಮಾಸ್ಟರ್ ಗೆ ( ಗ್ರಾಮೀಣ ಡಾಕ್ ಸೇವಕ ) ಮಾಸಿಕ ವೇತನ 12 ಸಾವಿರದಿಂದ 29 ಸಾವಿರ 380 ರೂಪಾಯಿ ಇರಲಿದೆ. ಹಾಗು ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ ಗೆ ( ಗ್ರಾಮೀಣ ಡಾಕ್ ಸೇವಕ ) 10 ಸಾವಿರದಿಂದ 24 ಸಾವಿರದ 470 ರೂಪಾಯಿ ನಿಗದಿಯಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆSSLC
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕಆಗಸ್ಟ್ 05, 2024
ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ

ಅಧಿಸೂಚನೆಯ ಮಾಹಿತಿಯಂತೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು, ಆಯಾ ರಾಜ್ಯದ ಅಧಿಕೃತ ಭಾಷೆಯನ್ನು ಓದಲುಮ ಬರೆಯಲು ಮತ್ತು ಮಾತನಾಡಲು ಬರಬೇಕಿದೆ. ಬೇಸಿಕ್ ಕಂಪ್ಯೂಟರ್ ಜ್ಞಾನದ ಪ್ರಮಾಣಪತ್ರ ಹೊಂದಿದ್ದವರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಲಾಗಿದೆ.

ಇನ್ನು ಹೆಚ್ಚಿನ ಉದ್ಯೋಗಾವಕಾಶದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಸಂದೇಶ್ ಎನ್ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version