ಶಿರೂರು ಗುಡ್ಡ ಕುಸಿತ: ನದಿ ಒಡಲಾಳ ಬಗೆಯುತ್ತಿರುವಾಗ ಪತ್ತೆಯಾಯಿತೇ ಮೆಟಲ್ ಅಂಶ?

ಅಂಕೋಲಾ : ಶಿರೂರು ಗುಡ್ಡ ಕುಸಿತದ ಗಂಗಾವಳಿ ನದಿ ತಟ ಮತ್ತು ನೀರಿನಲ್ಲಿ ಬೃಹತ್ ಯಂತ್ರದ ಕಾರ್ಯಾಚರಣೆ ವೇಳೆ ನದಿ ನೀರು ಮತ್ತು ಕಲ್ಲು ಮಣ್ಣು ರಾಶಿಯ ನಡುವೆ ಯಾವುದೋ ವಾಹನ , ಇಲ್ಲವೇ ಕಟ್ಟಡದ ಶೀಟ್ ಅಥವಾ ಕಲ್ಲು ಬಂಡೆಗಳಲ್ಲಿರುವ ಅಥವಾ ಬೇರೆ ಯಾವುದೇ ರೀತಿಯ ಮೆಟಲ್ ಅಂಶ ಕಂಡುಬರುತ್ತದೆ ಎನ್ನಲಾಗಿದ್ದು ಕಾರ್ಯಚರಣೆ ಮತ್ತಷ್ಟು ಚುರುಕುಗೊಂಡಿದೆ.

ಎನ್ ಡಿ ಆರ್ ಎಫ್ ತಂಡದೊಂದಿಗೆ ಡಿ. ಸಿ ಸಹ ಗಂಗಾವಳಿ ನದಿಯಲ್ಲಿ ಒಂದು ಸುತ್ತು ಸಾಗಿ,ಶೋಧ ಕಾರ್ಯಾಚರಣೆ ಸ್ಥಳ ವೀಕ್ಷಿಸಿ ಬಂದಿದ್ದಾರೆ. ಕೆಲವೇ ಕ್ಷಣಗಳಲ್ಲಿ ಕಾರ್ಯಾಚರಣೆಯ ಫಲಿತಾಂಶ ಮತ್ತು ಅದು ವಾಹನದ ಬಿಡಿಭಾಗವೇ,ಕಳೆದುಹೋದ ಕೇರಳ ಇಲ್ಲವೇ ತಮಿಳುನಾಡಿನ ಟ್ರಕ್ ಅಥವಾ ಇತರ ವಾಹನವೇ ಅಥವಾ ಕೊಚ್ಚಿ ಹೋದ ಟೀ ಸ್ಟಾಲ್ ಇಲ್ಲವೇ ಇತರೆ ಕಟ್ಟಡದ ಸಾಮಗ್ರಿಗಳಾಗಿರಬಹುದೇ, ಅಥವಾ ಖನಿಜಾಂಶ ಯಾವುದರಿಂದ ತೋರಿಸಿರುವ ಸಾಧ್ಯತೆ ಇದೆ ಎಂಬ ಕುರಿತು, ಸ್ಪಷ್ಟ ಚಿತ್ರಣ ಮತ್ತು ಪತ್ತೆ ಕಾರ್ಯದ ನಿಖರ ಮಾಹಿತಿ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version