Important
Trending

ಆಸ್ಪತ್ರೆಯ ಒಳಗಡೆ ಮೊಸಳೆ ಪ್ರತ್ಯಕ್ಷ: ಏನಾಯ್ತು ನೋಡಿ?

ದಾಂಡೇಲಿ: ಆಸ್ಪತ್ರೆಯ ಒಳಗಡೆ ಮೊಸಳೆಯ ಮರಿಯೊಂದು ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ ಘಟನೆ ದಾಂಡೇಲಿ ನಗರದ ಇಎಸ್‌ಐ ಆಸ್ಪತ್ರೆಯಲ್ಲಿ ನಡೆದಿದೆ. ಮೊಸಳೆಯ ಮರಿಯನ್ನು ನೋಡಿದೊಡನೆ ಸಿಬ್ಬಂದಿಗಳು ಒಮ್ಮೆಲೆ ಭಯ ಬಿದ್ದು ಅಚ್ಚರಿಗೊಂಡಿದ್ದಾರೆ. ತಕ್ಷಣವೆ ಇ.ಎಸ್.ಐ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ತುಕರಾಮ ಅವರು ಮೊಸಳೆಯ ಮರಿಯನ್ನು ಸುರಕ್ಷಿತವಾಗಿ ಹಿಡಿದು, ನದಿಗೆ ಬಿಟ್ಟು ಬಂದಿದ್ದಾರೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: ನದಿ ಒಡಲಾಳ ಬಗೆಯುತ್ತಿರುವಾಗ ಪತ್ತೆಯಾಯಿತೇ ಮೆಟಲ್ ಅಂಶ?

ಒಟ್ಟಿನಲ್ಲಿ ದಾಂಡೇಲಿಯ ಕಾಳಿ ನದಿಯಲ್ಲಿರುವ ಮೊಸಳೆಗಳು ಈಗ ನಗರದ ಹೃದಯ ಭಾಗದಲ್ಲಿರುವ ಇ.ಎಸ್.ಐ ಆಸ್ಪತ್ರೆಗೆ ಬರುವಷ್ಟರ ಮಟ್ಟಿಗೆ ಮುಂದಡಿಯಿಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

Back to top button