ಬಲೆಗೆ ಸಿಲುಕಿಕೊಂಡಿದ್ದ ಚಿಪ್ಪುಹಂದಿ: ಅಪರೂಪದ ಪ್ರಾಣಿಯನ್ನು ರಕ್ಷಿಸಿದ ಸ್ಥಳೀಯರು

ಚಿಕಿತ್ಸೆ ನೀಡಿ ಅರಣ್ಯ ಇಲಾಖೆಗೆ ಹಸ್ತಾಂತರ

ಅಂಕೋಲಾ: ಶಿರೂರು ಗುಡ್ಡ ಕುಸಿತದಿಂದ ಜನ ಜೀವನವೇ ಅರ್ಥವ್ಯಸ್ತವಾಗಿದ್ದು, ಸಾವು ನೋವು ಸಂಭವಿಸಿದೆ. ಗುಡ್ಡ ಕುಸಿತದ ಪರಿಣಾಮ ವನ್ಯಜೀವಿಗಳ ಮೇಲು ಪರಿಣಾಮ ಬೀರಿರುವ ಸಾಧ್ಯತೆ ಇದೆ. ಹೌದು, ತಾಲೂಕಿನ ಗಂಗಾವಳಿ ನದಿ ನೀರಿನಲ್ಲಿ ಚಿಪ್ಪುಹಂದಿಯAದು ಕೊಚ್ಚಿ ಬಂದಿದ್ದು,, ಗುಡ್ಡ ಕುಸಿತದ ಪರಿಣಾಮ ಇರಬಹುದೇ ಎಂಬ ಶಂಕೆ ಸ್ಥಳೀಯರಿಂದ ವ್ಯಕ್ತವಾದಂತಿದೆ. ಮೃದು ಸ್ವಭಾವದ ಅಪರೂಪದ ಚಿಪ್ಪು ಹಂದಿಯು, ಕೂರ್ವೆ ಭಾಗದ ಮೀನುಗಾರಿಕ ಬಲೆಯಲ್ಲಿ ಸಿಲುಕಿಕೊಂಡಿತ್ತು.

ಇದನ್ನು ಗಮನಿಸಿದ, ಸ್ಥಳೀಯ ಯುವಕರಾದ ಗಜಾನನ ಹರಿಕಂತ್ರ, ಸಚಿನ ಹರಿಕಂತ್ರ, ಅಜಿತ ಹರಿಕಂತ್ರ, ಪ್ರಶಾಂತ ಹರಿಕಂತ್ರ ಮತ್ತಿತರು, ಬಲೆಯಿಂದ ಬಿಡಿಸಿ,ಅರಣ್ಯ ಇಲಾಖೆಗೆ ಹಸ್ತಾಂತರಿಸಿ,ಬಲು ಅಪರೂಪದ ಈ ವನ್ಯ ಜೀವಿ ರಕ್ಷಣೆ ಮಾಡಿದ್ದಾರೆ.ತಮ್ಮ ಸಮಾಜದ ಈ ಹುಡುಗರು ಚಿಪ್ಪು ಹಂದಿ ರಕ್ಷಣೆ ಮಾಡಿರುವುದನ್ನು ಮೀನುಗಾರ ಮುಖಂಡ ರಾಜು ಹರಿಕಂತ್ರ ಶ್ಲಾಘಿಸಿದ್ದಾರೆ.

ಪ್ರಮುಖರಾದ ಹೂವಾ ಖಂಡೇಕರ ಮತ್ತಿತರರಿದ್ದರು. ಕೂರ್ವೆ ಭಾಗದ ಸ್ಥಳಿಯರು ತಂದು ನೀಡಿದ ಚಿಪ್ಪು ಹಂದಿಯನ್ನು ,ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ವಾಹನದಲ್ಲಿ ಸುರಕ್ಷಿತ ಅರಣ್ಯ ಪ್ರದೇಶದತ್ತ ಬಿಟ್ಟು ಬರಲು ತೆರಳಲಿದ್ದಾರೆ ಎನ್ನಲಾಗಿದೆ.ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಅರಣ್ಯಇಲಾಖೆಯ ಜೊತೆ ಎಲ್ಲರೂ ಕೈ ಜೋಡಿಸಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version