ಸರಾಯಿ ಕುಡಿದು ಬೀಚ್‌ನಲ್ಲಿ ಯಾಕೆ ಕುಳಿತಿದ್ದೀರಿ ಎಂದಿದ್ದೆ ತಪ್ಪಾಯ್ತು: ಮನೆಗೆ ಬಂದು ಕರಾವಳಿ ಕಾವಲು ಪಡೆ ಸಿಬ್ಬಂದಿ ಮೇಲೆ ಹಲ್ಲೆ

ಕಾರವಾರ : ಸರಾಯಿ ಕುಡಿದು ರಾತ್ರಿ ವೇಳೆ ಬೀಚಿನಲ್ಲಿ ಯಾಕೆ ಕುಳಿತಿದ್ದೀರಿ ಮನೆಗೆ ನಡೆಯಿರಿ ಎಂದು ಹೇಳಿದ್ದ,ಕರಾವಳಿ ಕಾವಲು ಪಡೆಯ ಕೆ ಏನ್ ಡಿ ಸಿಬ್ಬಂದಿ ಮನೆಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪಿತರಿಬ್ಬರು,ಆತನಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದಲ್ಲದೇ ಮತ್ತು ಆತನ ಕುಟುಂಬಸ್ಥರಿಗೂ ಥಳಿಸಿ ಜೀವ ಬೆದರಿಕೆ ಯೊಡ್ಡಿದ ಘಟನೆ ತಾಲೂಕಿನ ಮುದಗಾದಲ್ಲಿ ನಡೆದಿದ್ದು, ಈ ಕುರಿತು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುದಗಾದ ಸೀಬರ್ಡ್ ಕಾಲೊನಿ ನಿವಾಸಿ ವಿಷ್ಣು ಚಾರಾ ಮಾಜಾಳಿಕರ (4O),ಹಲ್ಲೆಗೊಳಗಾದ ಕೆ.ಎನ್ ಡಿ ಸಿಬ್ಬಂದಿಯಾಗಿದ್ದಾನೆ.

ಆತ ದೂರಿನಲ್ಲಿ ತಿಳಿಸಿದಂತೆ ಕಳೆದ 14 ವರ್ಷದಿಂದ ಕರಾವಳಿ ಕಾವಲು ಪಡೆಯಲ್ಲಿ ಕೆ.ಎನ್.ಡಿ. ಕರ್ತವ್ಯ ನಿರ್ವಹಿಸುತ್ತಿದ್ದ ತಾನು, ಕಳೆದ ಒಂದು ವಾರದ ಹಿಂದೆ ಮುದಗಾ ಸಮುದ್ರ ತೀರದಲ್ಲಿ ಕರ್ತವ್ಯದಲ್ಲಿದ್ದಾಗ, ಆಪಾದಿತರಾದ ರಾಜು ತಂದೆ ಗಣಪತಿ ಮಾಜಾಳಿಕರ (ಆ1) ಮತ್ತು ಜಿತೇಂದ್ರ ತಂದೆ ಗಣಪತಿ ಮಾಜಾಳಿಕರ (ಆ 2 ) ಇವರು ಸರಾಯಿ ಕುಡಿದು ಕುಳಿತಿದ್ದು, ಅವರಿಗೆ ರಾತ್ರಿಯ ವೇಳೆಯಲ್ಲಿ ಯಾಕೇ ಇಲ್ಲಿ ಕುಳಿತಿದ್ದೀರಿ ಮನೆಗೆ ಹೋಗಿರಿ ಅಂತಾ ಹೇಳಿ ಕಳುಹಿಸಿದ್ದ.

ಇದೇ ವಿಷಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ದಿನಾಂಕ 07-08-2024 ರಂದು ನಾನು ಮನೆಯಲ್ಲಿದ್ದಾಗ, ಆಪಾದಿತರಿಬ್ಬರೂ ನನ್ನ ಮನೆಯ ಅಂಗಳದಲ್ಲಿ,ಅತಿಕ್ರಮವಾಗಿ ಪ್ರವೇಶಿಸಿ, ನನಗೆ ಕರೆದು, ನಮಗೆ ಹೇಳಲು ನೀನು ಯಾರು ಎಂದು ಅವಾಚ್ಯ ಶಬ್ದಗಳಿಂದ ಬೈದು, ತಾವು ತಂದಿದ್ದ ಕಟ್ಟಿಗೆಯಿಂದ ತನಗೆ ತಲೆಗೆ, ಎಡಕೈಗೆ, ಬಲಕಾಲಿಗೆ ಹೊಡೆದು ಗಾಯಪಡಿಸಿದ್ದು ನಾನು ಬೊಬ್ಬೆ ಹಾಕಿದಾಗ, ತಪ್ಪಿಸಲು ಬಂದ ನನ್ನ ಹೆಂಡತಿ ರಾಜೇಶ್ವರಿ ಇವಳಿಗೆ ಕೈಯಿಂದ ಬೆನ್ನಿನ ಮೇಲೆ ಹೊಡೆದು ಅವಮಾನ ಪಡಿಸಿ, ನನ್ನ ತಂದೆಯವರಿಗೂ ಕೈಯಿಂದ ಕೆನ್ನೆಗೆ, ಎದೆಗೆ ಹೊಡೆದು ಗಾಯ, ನೋವು ಪಡಿಸಿ ನಿಮಗೆ ಸುಮ್ಮನೇ ಬಿಡುವುದಿಲ್ಲ ನೋಡಿಕೊಳ್ಳುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ತಿಳಿಸಿ, ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೇಳಿಕೊಂಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಕಾರವಾರ ಗ್ರಾಮೀಣ ಠಾಣೆ ಪೊಲೀಸರು,ಕಾನೂನು ಕ್ರಮ ಮುಂದುವರಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version