ಕುಮಟಾ: 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಸರಕಾರದ ನಿರ್ದೇಶನ ಹಾಗೂ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಕುಮಟಾ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಬೈಕ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕುಮಟಾ ಸಹಾಯಕ ಆಯುಕ್ತರಾದ ಕಲ್ಯಾಣಿ ಕಾಂಬಳೆಯವರು ಹಸಿರು ನಿಶಾನೆಯನ್ನು ತೋರಿಸುವ ಮೂಲಕ ಬೈಕ್ ಜಾಥಾಗೆ ಚಾಲನೆಯನ್ನು ನೀಡಿದರು. ನಂತರ ಮಾತನಾರೀ ವರ್ಷ ನಾವು 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೇವೆ. ಆ ನಿಟ್ಟಿನಲ್ಲಿ ಹರ್‌ಘರ್ ತಿರಂಗಾ ಅನುಷ್ಠಾನದ ಕುರಿತು ಇಂದು ನಾವು ಬೈಕ್ ಜಾಥಾವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಎಲ್.ಭಟ್ ಅವರು ಮಾತನಾಡಿ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲಾಧಿಕಾರಿಗಳು ಹಾಗೂ ಸರಕಾರದ ನಿದೇಶನದಂತೆ ನಾವು ನಮ್ಮ ತಾಲೂಕಿನಲ್ಲಿ ಇಂದು ಬೈಕ್ ಜಾಥಾ ಹಾಗೂ ನಾಳೆ ವಾಕಥಾನ ಜಾತಾವನ್ನು ಎರ್ಪಡಿಸಿದ್ದೇವೆ. ಎಲ್ಲಾ ಸಾರ್ವಜನಿಕರು, ಕುಮಟಾ ನಾಗರೀಕರೆಲ್ಲರೂ ಸೇರಿ ಮಾಸ್ತಿಕಟ್ಟಾ ಸರ್ಕಲ್‌ನಿಂದ ಗಿಬ್ ವ್ರತ್ತದ ವರೆಗೆ ಇಂದು ಬೈಕ್ ರ‍್ಯಾಲಿಯನ್ನು ಹಮ್ಮಿಕೊಂಡಿದ್ದೇವೆ ಎಂದರು.
ಈ ವೇಳೆ ಕುಮಟಾ ಗ್ರೇಡ 2 ತಹಶೀಲ್ದಾರರಾದ ಸತೀಶ ಗೌಡ, ತಾಲೂಕಾ ಆರೋಗ್ಯಾಧಿಕಾರಿಗಳಾದ ಆಜ್ಞಾ ನಾಯ್ಕ, ಪಿಎಸ್‌ಐ ಮಂಜುನಾಥ ಗೌಡರ್, ಪಿಎಸ್‌ಐ ರವಿ ಗುಡ್ಡಿ ಹಾಗೂ ವಿವಿದ ಇಲಾಖೆಯ ಅಧಿಕಾರಿಗಳು ಸಿಬ್ಬಂಧಿಗಳು ಹಾಜರಿದ್ದರು.
ವಿಸ್ಮಯ ನ್ಯೂಸ್, ನಾಗೇಶ ದೀವಗಿ, ಕುಮಟಾ