ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಹಿನ್ನಲೆಯಲ್ಲಿ ಒಟ್ಟು 15 ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಹೀಗಾಗಿ ಬೋಧನಾ ಅವಧಿ ಸರಿದೂಗಿಸಲು ಶನಿವಾರ ಪೂರ್ಣದಿನ ಶಾಲೆ ಮಾಡಲು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಪ್ರಾಯೋಗಿಕ ಅನುಭವಕ್ಕಾಗಿ ಗದ್ದೆಗಿಳಿದ ಶಾಲಾಮಕ್ಕಳು: ಸುಮಾರು 6 ಗುಂಟೆ ಕ್ಷೇತ್ರದಲ್ಲಿ ನಾಟಿ
ಮುಂದಿನ ಶನಿವಾರದಿಂದ ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶನಿವಾರ ಅರ್ಧದಿನದ ಬದಲು ಪೂರ್ಣ ಪ್ರಮಾಣದ ತರಗತಿ ನಡೆಯಲಿದೆ. ಆಗಸ್ಟ್ 17 ರಿಂದ ಪ್ರತಿ ಶನಿವಾರದಂದು ಪೂರ್ಣ ದಿವಸ ಶಾಲಾ ತರಗತಿಗಳನ್ನು ನಡೆಸುವಂತೆ ಉತ್ತರಕನ್ನಡ ಶೈಕ್ಷಣಿಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸೂಚಿಸಿದ್ದಾರೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್