ಪವರ್ ಗ್ರೀಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ( PGCIL Recruitment 2024) ಒಟ್ಟು 38 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅಧಿಸೂಚನೆಯ ಮಾಹಿತಿ ಪ್ರಕಾರ ಐಟಿಐ ಮತ್ತು ಡಿಪ್ಲೊಮಾ ಪೂರೈಸಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: ಅಕೌಂಟೆಂಟ್, ಕ್ಯಾಶಿಯರ್, ಡ್ರೈವರ್‌ಗೆ ಸೇರಿ ಹಲವು ಹುದ್ದೆಗಳಿಗೆ ನೇಮಕಾತಿ: 10 ರಿಂದ 15 ಸಾವಿರ ವೇತನ
ಹೌದು, ಪವರ್ ಗ್ರೀಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ( PGCIL Recruitment 2024) ಜೂನಿಯರ್ ಇಂಜಿನಿಯರ್ – ಸರ್ವೇ ಇಂಜಿನಿಯರಿoಗ್ – 15 ಹಾಗು ಸರ್ವೇಯರ್ – 15, ಕರಡುಗಾರ – 8 ಹುದ್ದೆಗಳು ಸೇರೆಇ ಒಟ್ಟು 38 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅಧಿಸೂಚನೆಯ ಮಾಹಿತಿ ಪ್ರಕಾರ ಜೂನಿಯರ್ ಇಂಜಿನಿಯರ್ ಅಂದ್ರೆ ಸರ್ವೇ ಇಂಜಿನಿಯರಿoಗ್‌ಗೆ 26 ಸಾವಿರದಿಂದ 1 ಲಕ್ಷದ 18 ಸಾವಿರದ ವರೆಗೆ ವೇತನ ಇರಲಿದೆ. ಮತ್ತು ಸರ್ವೇಯರ್ ಗೆ 85 ಸಾವಿರದ ವರೆಗೆ ವೇತನ ನಿಗದಿ ಮಾಡಲಾಗಿದೆ.
ಇಲಾಖೆ | ಪವರ್ ಗ್ರೀಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ |
ಒಟ್ಟು ಹುದ್ದೆಗಳು | 38 |
ವಿದ್ಯಾರ್ಹತೆ | ಐಟಿಐ & ಡಿಪ್ಲೊಮಾ |
ಅರ್ಜಿ ಸಲ್ಲಿಸುವ ವಿಧಾನ | Online |
ಜೂನಿಯರ್ ಇಂಜಿನಿಯರ್ ಹುದ್ದೆಗೆ 300 ರೂಪಾಯಿ, ಸರ್ವೇಯರ್ ಹುದ್ದೆಗೆ 200 ರೂಪಾಯಿ ಅರ್ಜಿ ಶುಲ್ಕವಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ, ಮತ್ತು ಸಂದರ್ಶನ ನಡೆಸಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, 29 ಆಗಸ್ಟ್ 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ | 29 ಆಗಸ್ಟ್ 2024 |
ಅಧಿಸೂಚನೆ ಓದಲು | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
ಇನ್ನು ಹೆಚ್ಚಿನ ಉದ್ಯೋಗಾವಕಾಶದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್