ದಾಂಡೇಲಿ: ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೋಷಪೂರಿತ ನಂಬರ್ ಪ್ಲೇಟ್‌ಗೆ ಸಂಬoಧಿಸಿದoತೆ ವಿಶೇಷ ಕಾರ್ಯಾಚರಣೆಗೆ ಇಳಿದ ಪೊಲೀಸರು ನಿಯಮಾನುಸಾರ ಇಲ್ಲದ ದೋಷಪೂರಿತ ನಂಬರ್ ಪ್ಲೇಟ್ ಹೊಂದಿದ್ದ ದ್ವಿಚಕ್ರ ವಾಹನಗಳ ಚಾಲಕರುಗಳಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ. ನಗರ ಪ್ರದೇಶದಲ್ಲಿ ದೋಷಪೂರಿತ ನಂಬರ್ ಪ್ಲೇಟ್ ಅಳವಡಿಸಿ ಸಂಚರಿಸುತ್ತಿದ್ದ 30 ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚಿದ ಪೋಲೀಸರು , ಚಾಲಕರನ್ನು ಠಾಣೆಗೆ ಕರೆಯಿಸಿ, ದಂಡ ವಿಧಿಸಿ ಸರಿಯಾದ ಕ್ರಮದಲ್ಲಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವಂತೆ ಎಚ್ಚರಿಕೆ ನೀಡಿದರು. ಈ ವೇಳೆ ದಂಡದ ರೂಪದಲ್ಲಿ ಒಟ್ಟು 15 ಸಾವಿರ ರೂಪಾಯಿ ವಸೂಲಿ ಮಾಡಲಾಯಿತು.
ವಿಸ್ಮಯ ನ್ಯೂಸ್, ದಾಂಡೇಲಿ