ಹೊನ್ನಾವರ: ಹೊನ್ನಾವರ ಸಂತೆ ಮಾರುಕಟ್ಟೆಯಲ್ಲಿ ನೀರುನುಗ್ಗಿ ಅವಾಂತರವಾಗಿದೆ ಎಂಬ ವಿಡಿಯೋವೊಂದು ಎಲ್ಲೆಡೆ ವೈರಲ್ ( Viral Video ) ಆಗಿತ್ತು. ನಮ್ಮ ವಿಸ್ಮಯ ಟಿ.ವಿಯ ವರದಿಗಾರರು ಸ್ಥಳಕ್ಕೆ ತೆರಳಿ ಮಾಹಿತಿ Fact Check ಕಲೆಹಾಕಿದಾಗ ಇದೊಂದು ಸುಳ್ಳುಸುದ್ದಿ ( Fake News ) ಎಂಬುದು ಖಚಿತವಾಗಿದೆ. ಹೊನ್ನಾವರದಲ್ಲಿ ಮಳೆ ಜೋರಾಗಿದ್ದು, ಪ್ರತಿ ಶನಿವಾರದಂದು ಪಟ್ಟಣದ ಬಂದರ್ ನಲ್ಲಿ ಸಂತೆ ಮಾರುಕಟ್ಟೆ ಇರುವುದರಿಂದ ಇದನ್ನೆ ಬಂಡವಾಳ ಮಾಡಿಕೊಂಡು ಯಾರೋ ಕಿಡಿಗೇಡಿಗಳು ವಿಡಿಯೋವನ್ನು ಹರಿಬಿಟ್ಟಿದ್ದಾರೆ.
ಇದನ್ನೂ ಓದಿ: ಇಲ್ಲಿದೆ ಸರ್ಕಾರಿ ಉದ್ಯೋಗಾವಕಾಶ: ಐಟಿಐ ಮತ್ತು ಡಿಪ್ಲೋಮಾ ಆದವರು ಅರ್ಜಿ ಸಲ್ಲಿಸಿ
ಓಮ್ಮೆಲೇ ಇಷ್ಟೊಂದು ನೀರು ಸಂತೆ ಮಾರುಕಟ್ಟೆಗೆ ಹೇಗೆ ಬಂತು ಎನ್ನುವುದರ ಬಗ್ಗೆ ಗೊಂದಲ ಮೂಡಿತ್ತು. ಆದರೆ, ಇದೊಂದು ಸುಳ್ಳುಸುದ್ದಿಯಾಗಿದ್ದು, ಯಾರೋ ಕಿಡಿಗೇಡಿಗಳು ಮಾಡಿದ ಕೃತ್ಯ ಎಂಬುದು ಸಾಬೀತಾಗಿದೆ. ಇತ್ತಿಚಿಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹೆಚ್ಚುಹೆಚ್ಚು ಹರಿದಾಡುತ್ತಿದ್ದು, ಇದನ್ನೇ ನಂಬುವ ಕೆಲವರು, ಸತ್ಯಾಸತ್ಯತೆ ತಿಳಿಯದೇ ಶೇರ್ ಮಾಡುತ್ತಿದ್ದಾರೆ. ಶೇರ್ ಮಾಡುವ ಮುನ್ನ ಸುದ್ದಿಯ ಸತ್ಯಾಸತ್ಯತೆ ತಿಳಿಯುವುದು ಒಳಿತು. ಸುಳ್ಳಿ ಸುದ್ದಿಗಳನ್ನು ಶೇರ್ ಮಾಡಿ, ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯೂ ಇದೆ.