ಹೊನ್ನಾವರ: ಕಳೆದ 2-3 ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದ ಹೊನ್ನಾವರದ ತಾಲೂಕಿನ ಮುಗ್ವಾದ ಆರೋಳ್ಳಿಯಲ್ಲಿ ಮನೆ ಕುಸಿದ ಘಟನೆ ನಡೆದಿದೆ. ಈ ವೇಳೆ ವೃದ್ಧೆ, ಕುಸಿದುಬಿದ್ದ ಮನೆಯ ಅವಶೇಷದಡಿ ಸಿಲುಕಿದ್ದಳು. ಈ ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ, ಕೂಡಲೇ ಸ್ಥಳಕ್ಕೆ ಆಗಮಿಸಿ, ಸ್ಥಳೀಯರ ಸಹಕಾರದೊಂದಿಗೆ ವೃದ್ಧೆಯನ್ನು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: Fact Check: ವೈರಲ್ ಆದ ಸುಳ್ಳು ಸುದ್ದಿ: ಅಸಲಿಯತ್ತೇನು ನೋಡಿ?
ಮನೆಯ ಹಿಂಬದಿಯಲ್ಲಿ ಕುಳಿತಿದ್ದಾಗ ಗೋಡೆ ಕುಸಿದುಬಿದ್ದು ದುರ್ಘಟನೆ ಸಂಭವಿಸಿದೆ. ರಕ್ಷಣೆಗೊಳಗಾದ ಮಹಿಳೆಯನ್ನು ಸುಲಭಾ ಕಾಮತ್ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ತಹಶೀಲ್ದಾರ ರವಿರಾಜ ದೀಕ್ಷಿತ, ಮುಗ್ವಾ ಪಂಚಾಯತ ಸದಸ್ಯರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.