ಹೊನ್ನಾವರ: ವಿವಾ ಚಾರೀಟೇಬಲ್ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರವು ಪಟ್ಟಣದ ಮಹಾಲೆ ಕಾಂಪ್ಲೆಕ್ಸ್ ನಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಮಿನಿನ್ ಲೋಪಿಸ್ ಇವರ ಸ್ಮರಣಾರ್ಥಕವಾಗಿ ವಿವಾ ಚಾರೀಟೇಬಲ್ ಟ್ರಸ್ಟ ಆಯೋಜಿಸಿದ ರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಫಾಧರ್ ಜೋಯಲ್ ಲೋಪಿಸ್, ನಮ್ಮ ತಂದೆಯವರಾದ ಮಿನಿನ್ ಲೋಪಿಸ್ ಅವರ ಅನಾರೋಗ್ಯದ ಸಮಯದಲ್ಲಿ 9 ಜನರಿಂದ ರಕ್ತದಾನ ಪಡೆದಿದ್ದು, ಆದರೆ ಇಂದು ಅವರು ನಮ್ಮ ಜೊತೆಗೆ ಇಲ್ಲ. ರಕ್ತದಾನ ಮಾಡುವುದರಿಂದ ರೋಗಗ್ರಸ್ಥರು ಮತ್ತು ಗಾಯಗೊಂಡವರನ್ನು ಬದುಕಿಸಲು ಸಾದ್ಯ ಇರುವುದರಿಂದ ಈ ಶಿಬಿರವನ್ನು ಆಯೋಜಿಸಿದ್ದೇವೆ ಎಂದರು.
ವಿವಾ ಚಾರೀಟೇಬಲ್ ಟ್ರಸ್ಟ ಅಧ್ಯಕ್ಷರಾದ ನಿಲನ್ ಮಿರಾಂದಾ ಅವರು ಮಾತನಾಡಿ ಇದರಲ್ಲಿ ಯಾವುದೇ ಜಾತಿ ಭೇಧವಿಲ್ಲದೇ ರಕ್ತದಾನ ನಡೆಸಿದ್ದು, ಸಾರ್ವಜನಿಕರು ರಕ್ತದಾನ ಮಾಡುತ್ತಿದ್ದಾರೆ. ನಾವು ಇನ್ನೋಬ್ಬರಿಗೆ ಸಹಾಯ ಮಾಡಿದ್ರೆ ಅವರು ನಮಗೆ ಸಹಾಯ ಮಾಡುತ್ತಾರೆ ಹಾಗಾಗಿ ನಾವು ರಕ್ತದಾನ ಶಿಬಿರ ಆಯೋಜಿಸಿದ್ದೇವೆ ಎಂದರು ಈ ಸಂದರ್ಭದಲ್ಲಿ ರಕ್ತದಾನ ಮಾಡಿದ ಶಿಬಿರಾರ್ಥಿಗಳಿಗೆ ಬ್ಲಡ್ ಬ್ಯಾಂಕ ಕುಮಟಾ ವತಿಯಿಂದ ಸಟ್ರಿಫಿಕೇಟ್ ವಿತರಿಸಲಾಯಿತು. 26 ಜನರು ರಕ್ತದಾನ ಮಾಡಿದರು.