BEML Recruitment 2024: ಉದ್ಯೋಗಾವಕಾಶ: ಐಟಿಐ, ಡಿಪ್ಲೋಮಾ & ಪದವಿ ಪಾಸಾದವರು ಅರ್ಜಿ ಸಲ್ಲಿಸಬಹು
, ಸೆಪ್ಟೆಂಬರ್ 4, 2024 ಅರ್ಜಿ ಸಲ್ಲಿಕೆಗೆ ಕೊನೆಯ ದಿನ
BEML Recruitment 2024: ಬೆಂಗಳೂರು ಮೂಲದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ( BEML-ಬಿಇಎಂಎಲ್) ಕಂಪನಿಯಲ್ಲಿ 100 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಂದು ವರ್ಷದ ತರಬೇತಿ ಅವಧಿಯಲ್ಲಿ ಮಾಸಿಕ 15,500 ರೂಪಾಯಿ ಮಾಸಿಕ ವೇತನ ಇರಲಿದೆ ಎಂದು ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ. ಈ ಹುದ್ದೆಗಳಿಗೆ ಐಟಿಐ, ಡಿಪ್ಲೋಮಾ ಹಾಗೂ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ.
BEML Recruitment 2024: ಐಟಿಐ ಟ್ರೈನಿ ಹಾಗೂ ಆಫೀಸ್ ಅಸಿಸ್ಟಂಟ್ ಟ್ರೈನಿ ಸೇರಿ 100 ಹುದ್ದೆಗಳು ಖಾಲಿಯಿವೆ. ಆಫೀಸ್ ಅಸಿಸ್ಟಂಟ್ ಟ್ರೈನಿ ಹುದ್ದೆಗಳಿಗೆ ಪದವಿ ಅಥವಾ ಡಿಪ್ಲೋಮಾ ಪಾಸಾದವರು ಅರ್ಜಿ ಸಲ್ಲಿಸಬಹುದು. ಉಳಿದ ಹುದ್ದೆಗಳಿಗೆ ಸಂಬoಧಿಸಿದ ವಿಷಯದಲ್ಲಿ ಐಟಿಐ ಪೂರೈಸಿರಬೇಕಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 4 ಕಡೆಯ ದಿನ. ದೈಹಿಕ ಪರೀಕ್ಷೆ, ಕಂಪ್ಯೂಟರ್ ಆಧಾರಿತ ಪರೀಕ್ಷೆ, ಮೆಡಿಕಲ್, ದಾಖಲಾತಿ ಪರಿಶೀಲನೆ ಮೂಲಕ ಈ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಸಂಸ್ಥೆ | BEML |
ಒಟ್ಟು ಹುದ್ದೆಗಳು | 100 |
ವಿದ್ಯಾರ್ಹತೆ | ಐಟಿಐ, ಡಿಪ್ಲೋಮಾ & ಪದವಿ |
ಅರ್ಜಿ ಸಲ್ಲಿಕೆ ವಿಧಾನ | Online |
ಆರಂಭಿಕ ವೇತನ | 15,500 |
ಐಟಿಐ ಟ್ರೈನಿ ಟರ್ನರ್ 11, ಐಟಿಐ ಟ್ರೈನಿ ಫಿಟ್ಟರ್ 7, ಐಟಿಐ ಟ್ರೈನಿ ಮೆಕಾನಿಸ್ಟ್ 11, ಐಟಿಐ ಟ್ರೈನಿ ವೆಲ್ಡರ್ 18, ಐಟಿಐ ಟ್ರೈನಿ ಎಲೆಕ್ಟ್ರಿಷಿಯನ್ 8 ಮತ್ತು ಆಫೀಸ್ ಅಸಿಸ್ಟಂಟ್ ಟ್ರೈನಿ 46 ಹುದ್ದೆಗಳಿಗೆ ನೇಮಕಾಗಿ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳು ಒಂದು ವರ್ಷ ತರಬೇತಿ ಅವಧಿ ಇರುತ್ತದೆ, ಅಲ್ಲದೆ, ಮತ್ತೊಂದು ವರ್ಷ ಒಪ್ಪಂದ ಅವಧಿಯನ್ನು ಯಶಸ್ವಿಯಾಗಿ ಪೂರೈಸಬೇಕು. ಎರಡು ವರ್ಷಗಳ ಬಳಿಕ ನಿಯಮಾನುಸಾರ ಬಿಇಎಂಎಲ್ ನ ಖಾಯಂ ಉದ್ಯೋಗಿಗಳಾಗುತ್ತಾರೆ.
ಅರ್ಜಿ ಸಲ್ಲಿಸಲು ಕೊನೆಯ ದಿನ | ಸೆಪ್ಟೆಂಬರ್ 4, 2024 |
ಅಧಿಸೂಚನೆ ಓದಲು | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಸೆಪ್ಟೆಂಬರ್ 4, 2024 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು 32 ವರ್ಷದ ವಯೋಮಿತಿ ನಿಗದಿಪಡಿಸಲಾಗಿದೆ. ಇನ್ನು ಹೆಚ್ಚಿನ ಉದ್ಯೋಗಾವಕಾಶದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್