ಅಳಿವೆ ದಂಡೆಯಲ್ಲಿ ಸಿಲುಕಿದ ಬೋಟ್: 30ಕ್ಕೂ ಅಧಿಕ ಜನರು ಪ್ರಾಣಾಪಾಯದಿಂದ ಪಾರು

ಹೊನ್ನಾವರ: ಮೀನುಗಾರಿಕೆ ಮುಗಿಸಿ ಮರಳಿ ಬರುವಾಗ ಬೋಟ್ ಒಂದು ಅಳಿವೆ ದಂಡೆಗೆ ಸಿಲುಕಿ ಸಮುದ್ರ ತೀರಕ್ಕೆ ಬಂದು ನಿಂತ ಘಟನೆ ಹೊನ್ನಾವರದಲ್ಲಿ ನಡೆದಿದೆ. 30ಕ್ಕು ಅಧಿಕ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ, ಕರಾವಳಿ ಕಾವಲು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೋಳಿ ಗೂಡಿಗೆ ನುಗ್ಗಿದ ಹೆಬ್ಬಾವು: 3 ದೊಡ್ಡ ಕೋಳಿಗಳನ್ನು ನುಂಗಿ, 14 ಮರಿಗಳನ್ನು ಸಾಯಿಸಿ ಮನೆಯವರಲ್ಲಿ ಆತಂಕ

ಹೌದು, ಅರಬಿಯನ್ ಸೀ ಎಂಬ ಹೆಸರಿನ ಬೋಟ್ ಅಳಿವೆಯ ಹೂಳಿನಲ್ಲಿ ಹೂತಿದ್ದು, ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಎಲ್ಲ ಸಹಾಯ ಪಡೆದು ಕಾರ್ಯಾಚರಣೆ ನಡೆಸಲಾಯಿತು ಎಂದು ವಳಿ ಮಿನುಗಾರರ ಕಾರ್ಮಿಕರ ಸಂಘದ ಅಧಕ್ಷ ರಾಜೇಶ್ ತಾಂಡೇಲ್ ತಿಳಿಸಿದ್ದಾರೆ. ಅಲ್ಲದೆ, 300 ಮೀಟರ್ ನಷ್ಟು ಅಗಲವಿದ್ದ ಅಳಿವೆ ಈಗ 15-20 ಮೀಟರ್ ಗೆ ಕಿರಿದಾಗಿರುವ ಬಗ್ಗೆ ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯು ಅನೇಕ ಬೋಟ್ಗಳು ಅಳಿವೆಗೆ ಸಿಲುಕಿ ಹಾನಿಯಾಗಿದೆ. ಅಳಿವೆಯ ಹೂಳು ತೆಗೆದು ಮೀನುಗಾರರಿಗೆ ಅನೂಕೂಲ ಮಾಡಿಕೊಡಬೇಕೆನ್ನುವ ಆಗ್ರಹ ಕೇಳಿಬಂದಿದೆ.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Exit mobile version