Important
Trending

ಅಮದಳ್ಳಿ ವೀರ ಗಣಪತಿಯ ಅಲಂಕಾರಕ್ಕೆ ಸಿದ್ದಗೊಂಡ ಬೆಳ್ಳಿಯ ಹೊಸ ಮುಖವಾಡ

ಕಾರವಾರ : ಅಸಂಖ್ಯ ಭಕ್ತರ ಆರಾಧ್ಯ ದೈವ ಅಮದಳ್ಳಿಯ ಶ್ರೀ ವೀರ ಗಣಪತಿ ದೇವರಿಗೆ ಬೆಳ್ಳಿಯ ಹೊಸ ಮುಖವಾಡ ಸಮರ್ಪಣೆಗೆ ಸೆಪ್ಟೆಂಬರ್ 1 ರ ರವಿವಾರ ಬೆಳಿಗ್ಗೆ ಶುಭ ಮುಹೂರ್ತ ಕೂಡಿ ಬಂದಿದೆ. ಅದರ ಪೂರ್ವಭಾವಿಯಾಗಿ ಆಗಸ್ಟ್ 31 ರ ಶನಿವಾರ ಸಂಜೆಯಿಂದ ವಿವಿಧ ಧಾರ್ಮಿಕ ವಿಧಿ-ವಿಧಾನ, ಪೂಜಾ ಕಾರ್ಯ ನಡೆಯಲಿದೆ.

ನಾಡ ಬಂದೂಕಿನ ಗುಂಡು ತಗುಲಿ ವ್ಯಕ್ತಿ ಸಾವು: ಶೂಟೌಟ್ ಸುತ್ತ ಅನುಮಾನ?

ಸೆಪ್ಟೆಂಬರ್ 1 – 2024 ರ ರವಿವಾರ ಬೆಳಿಗ್ಗೆ ಕಲಶಪೂಜೆ ಗೃಹಶಾಂತಿ, ಕಲಾವೃದ್ಧಿ ಹೋಮ, ಗಣಹೋಮ,108 ಕಲಶ ಅಭಿಷೇಕ ನಡೆಯಲಿದೆ. ಬಳಿಕ ಬೆಳಿಗ್ಗೆ 10.02 ರ ಕನ್ಯಾ ಲಗ್ನದಲ್ಲಿ ಶ್ರೀ ವೀರಗಣಪತಿ ದೇವರಿಗೆ ಕವಚ ಸಮರ್ಪಣೆ, ಮಹಾಪೂಜೆ, ರಾಜೋಪಚಾರ ಪೂಜೆ ಹಾಗೂ ತೀರ್ಥ ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ 2.00 ರಿಂದ ಮಹಾ ಅನ್ನ ಸಂತರ್ಪಣೆ ಇದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ , ಶ್ರೀ ದೇವರ ದರ್ಶನ ಭಾಗ್ಯ ಪಡೆದು, ಪ್ರಸಾದ ಸ್ವೀಕರಿಸಿ, ಕೃತಾರ್ಥರಾಗುವಂತೆ, ಶ್ರೀ ವೀರಗಣಪತಿ ಸಂಸ್ಥಾನ ಅಮದಳ್ಳಿಯ, ಆಡಳಿತ ಮಂಡಳಿಯವರು ಕೋರಿಕೊಂಡಿದ್ದಾರೆ.

ರವಿವಾರ ರಾತ್ರಿ ಯಕ್ಷಗಾನ ಕಲಾಮೇಳ ಶಿರಸಿ ಇವರು, ಮಾರುತಿ ಪ್ರತಾಪ ಎಂಬ ಸುಂದರ ಪೌರಣಿಕ ಯಕ್ಷಗಾನ ಆಡಿ ತೋರಿಸಲಿದ್ದು, ಯಕ್ಷ ಪ್ರೇಮಿಗಳು ಹಾಗೂ ದೇವಸ್ಥಾನದ ಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಲು ಸಂಘಟಕರು, ಸರ್ವರಲ್ಲಿ ಕೋರಿಕೊಂಡಿದ್ದಾರೆ. ಕಳೆದ ಮೇ ತಿಂಗಳ ಕೊನೆಯಲ್ಲಿ ಅಮದಳ್ಳಿಯ ವೀರಗಣಪತಿ ದೇವಸ್ಥಾನಕ್ಕೆ ಒಳನುಗ್ಗಿದ್ದ ಕಳ್ಳರು, ಶ್ರೀ ದೇವರ ಬೆಳ್ಳಿಯ ಮುಖವಾಡವನ್ನೇ ಕದ್ದು ಪರಾರಿಯಾಗಿದ್ದರು.

ಇದರಿಂದ ಹಲವು ಭಕ್ತರ ಮನಸ್ಸಿಗೂ ನೋವಾಗಿತ್ತು. ಕಳ್ಳರು ದೇವರ ಒಂದು ಮುಖವಾಡವನ್ನು ಕದ್ದೊಯ್ದಿದ್ದರಾದರೂ,ದೇವಸ್ಥಾನದ ಸುಪರ್ದಿಯಲ್ಲಿಯೇ ಇದ್ದ ಬೇರೊಂದು ಹಳೆಯ ಕವಚವನ್ನು ಶ್ರೀ ದೇವರಿಗೆ ತೊಡಿಸಿ ಈವರೆಗೆ ಪೂಜಿಸಿಕೊಂಡು ಬರಲಾಗುತ್ತಿತ್ತು.ಆದರೆ ಹಳೆಯ ಕವಚ ಹೊಳಪು ಕಳೆದುಕೊಂಡಿರುವುದು ಮತ್ತಿತರ ಕಾರಣಗಳಿಂದ ಈದೀಗ ಸದ್ಭಕ್ತರ ಕಾಣಿಕೆ ಮತ್ತು ಸೇವೆ ರೂಪದಲ್ಲಿ,ಸ್ಥಳೀಯ ಆಡಳಿತ ಮಂಡಳಿಯವರು ಮತ್ತೆ ಶ್ರೀ ದೇವರಿಗೆ ಬೆಳ್ಳಿಯ ಹೊಸ ಮುಖವಾಡ ಮಾಡಿಸಿದ್ದಾರೆ. ಸೆ 1 ರ ರವಿವಾರ ಬೆಳಿಗ್ಗೆ ಶ್ರೀ ದೇವರನ್ನು ಅಲಂಕರಿಸಲಿರುವ ರಜತ ಕವಚ,ದೇಗುಲದ ಕಳೆಯನ್ನು ಹೆಚ್ಚಿಸಲಿದೆಯಲ್ಲದೇ, ಶ್ರೀ ದೇವರ ಅಪಾರ ಭಕ್ತವೃಂದದ ನೆಮ್ಮದಿ ಹಾಗೂ ಸಂತಸಕ್ಕೆ ಕಾರಣವಾಗಲಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button