ವಿದೇಶದಲ್ಲಿ ನಡೆದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ಭಟ್ಕಳ ಹುಡುಗಿ

ಭಟ್ಕಳ; ಯುರೋಪಿನ ಹಂಗೇರಿಯಲ್ಲಿ  ನಡೆದ ಯೂತ್ ವಲ್ಡ್  ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಧನ್ವಿತಾ ವಾಸು ಮೊಗೇರ್ ಚಿನ್ನದ ಪದಕ ಗೆದ್ದು ವಲ್ಡ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ.

ಪ್ರಪ್ರಥಮ ಬಾರಿಗೆ ಕಿಕ್ ಬಾಕ್ಸಿಂಗ್ ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ವಾಕೊ ಯೂಥ್ ವರ್ಲ್ಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ -2024 ರಲ್ಲಿ ಭಾರತ  ಪ್ರತಿನಿಧಿಸಿದ್ದರು. ಯುರೋಪಿನ ಹಂಗೇರಿಯ ಬುಡಾಪೆಸ್ಟ್ ನಲ್ಲಿ ಅಗಸ್ಟ್ 23 ರಿಂದ ಸಪ್ಟೆಂಬರ್ 1 ರ ತನಕ ಈ ಸ್ಪರ್ಧೆ ನಡೆದಿತ್ತು,

ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮತ್ತು ಭಟ್ಕಳ ತಾಲೂಕಿನ ಕಿಕ್ ಬಾಕ್ಸಿಂಗ್ ಪಟುಗಳಾದ 7 ರಿಂದ 9 ವರ್ಷ ವಯೋಮಿತಿಯ ಬಾಲಕಿಯರ 18kg ಪಾಯಿಂಟ್ ಪೈಟ್ ವಿಭಾಗದಲ್ಲಿ ಧನ್ವಿತಾ ವಾಸು ಮೊಗೇರ ಚಿನ್ನದ ಪದಕವನ್ನು ಗೆದ್ದು ವಲ್ಡ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ.

ಅವನಿ ಸೂರಜ್ ರಾವ್ ಮ್ಯೂಸಿಕಲ್ ಫಾರ್ಮ್ ಹಾರ್ಡ್ ಸ್ಟೈಲ್ ನಲ್ಲಿ ಬೆಳ್ಳಿಯ ಪದಕವನ್ನು ಪಡೆದಿದ್ದಾಳೆ. ಪದಕಕ್ಕೆ ಕೊರಳೊಡ್ಡಿದ ಈ ಕ್ರೀಡಾಪಟುಗಳೊಂದಿಗೆ
ಭಟ್ಕಳದ ನಾಗಶ್ರೀ ಮಾರ್ಷಲ್ ಆರ್ಟ್ಸ್ & ಫಿಟ್ನೆಸ್ ನ.
ನಾಗಶ್ರೀ ,,, ಭಾರತ ತಂಡದ ಕೋಚ್ ಆಗಿ ಭಾಗವಹಿಸಿದ್ದು, ಸಾಧನೆಗೈದ ಅಭ್ಯರ್ಥಿಗಳು ಇದೇ ಸಂಸ್ಥೆಯ ಕಿಕ್ ಬಾಕ್ಸಿಂಗ್ ವಿದ್ಯಾರ್ಥಿಗಳಾಗಿದ್ದಾರೆ.

ವಿಸ್ಮಯ ನ್ಯೂಸ್ ಈಶ್ವರ್ ನಾಯ್ಕ ಭಟ್ಕಳ

Exit mobile version