Follow Us On

WhatsApp Group
Focus News
Trending

ಈ ಗೋಮಾಳ ಜಾಗದಲ್ಲಿ ಕೈಗಾರಿಕೆ ಬೇಡವೇ ಬೇಡ: ಶಾಸಕರ ಎದುರು ಆಕ್ರೋಶ ಹೊರಹಾಕಿದ ಸ್ಥಳೀಯರು

ಸಿದ್ದಾಪುರ : ತಾಲೂಕಿನ ಮನ್ಮನೆ ಗ್ರಾಮ  ಪಂಚಾಯತ ವ್ಯಾಪ್ತಿಯ  ಐಗಳಕೊಪ್ಪ ಸಮೀಪ 47 ಎಕರೆ ಪ್ರದೇಶದಲ್ಲಿ ನಿಯೋಜಿತ  ಕೈಗಾರಿಕ ಸಂಕೀರ್ಣದ  ಭೂಮಿ  ವೀಕ್ಷಣೆಗೆ ಕೈಗಾರಿಕಾ ಸಚಿವರ ನಿರ್ದೇಶನದಂತೆ  ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ,ಆಗಮಿಸಿದ್ದರು . ಈ ಸಂದರ್ಭದಲ್ಲಿ ಸ್ಥಳೀಯರು  ಈ ಜಾಗವು ಗೋಮಾಳ ಜಾಗವಾಗಿದ್ದು ರೈತರು  ಜಾನುವಾರುಗಳ ಮೇವಿಗೆ ಕಾಯ್ದಿರಿಸಿಕೊಂಡು ಬಂದಿದ್ದೇವೆ . ಹಾಗಾಗಿ ಇಲ್ಲಿ ಕೈಗಾರಿಕೆ ಮಳಿಗೆ ನಿರ್ಮಾಣವಾಗುವುದು ನಮಗೆ ಅಗತ್ಯವಿಲ್ಲ ಅಲ್ಲದೆ ಇದರಿಂದ ರೈತರಿಗೆ ಹಲವಾರು ರೀತಿಯ ಸಮಸ್ಯೆ ಗಳು ಎದುರಾಗುತ್ತವೆ  ಎಂದು ವಿರೋಧಿಸಿದ  ಘಟನೆ ನಡೆಯಿತು.

2015ರಲ್ಲಿ ಇಲ್ಲಿ ಕೈಗಾರಿಕೆಗಳ  ಮಳಿಗೆ ಪ್ರಾರಂಭಿಸಲು ಯೋಜನೆ ರೂಪಿಸಿ  ಈಗ ಅದಕ್ಕೆ 30 ಕೋಟಿ ಅನುದಾನ ಮಂಜೂರು ಆಗಿರುತ್ತದೆ, ಈ ಜಾಗದಲ್ಲಿ   211 ಮಳಿಗೆಗಳು ತೆರೆಯಲಾಗುತ್ತಿದ್ದು ಅದಕ್ಕೆ 311 ಅರ್ಜಿಗಳು ಈಗಾಗಲೇ ಸ್ಥಳೀಯರಿಂದ ಇಲಾಖೆಗೆ ಬಂದಿರುವ ಹಿನ್ನಲೆ  ಸರ್ಕಾರ ಮಳಗೆಗಳನ್ನ  ನಿರ್ಮಿಸಲು ಮುಂದಾಗಿತ್ತು, ಸಾರ್ವಜನಿಕರು ಇಲ್ಲಿ ವಿರೋಧಿಸಿರುವುದರ ಹಿನ್ನೆಲೆಯಲ್ಲಿ ಶಾಸಕರು  ವಾಪಸ ತೆರಳಿದರು.

ಶಾಸಕರು ಸ್ಥಳಕ್ಕೆ ಬಂದ ಸಂದರ್ಭದಲ್ಲಿ ಸ್ಥಳೀಯ ರೈತರು ಸ್ಥಳದ ಬಗ್ಗೆ ಮಾಹಿತಿಯನ್ನು ನೀಡಿ ಚರ್ಚೆಯನ್ನು ನಡೆಸಿದರು.
ಈಗಾಗಲೇ ಈ ವಿಷಯದ ಕುರಿತಂತೆ ಧಾರವಾಡ ಮತ್ತು ಬೆಂಗಳೂರು ಕೋರ್ಟ್ ನಲ್ಲಿ ದಾವೆ ಹೂಡಿರುವುದಾಗಿ ಸ್ಥಳೀಯ ರೈತರು  ಮಾಹಿತಿ ನೀಡಿದರು.

ಇಲ್ಲಿ ಕೈಗಾರಿಕೆ ಪ್ರಾರಂಭವಾಗುವುದರಿಂದ ಜಾನುವಾರುಗಳಿಗೆ ಮೇವಲು ತೊಂದರೆ ಉಂಟಾಗುತ್ತದೆ ಮತ್ತು ಬೋರ್ವೆಲ್ ಗಳನ್ನ ತೆಗೆದು ನೀರಿನ ಅಂತರ್ಜಲ ಮಟ್ಟಕ್ಕೆ  ಸಮಸ್ಯೆ ಉಂಟಾಗುತ್ತದೆ ಹಾಗಾಗಿ ಇಲ್ಲಿ ನಮಗೆ ಇದು ಅವಶ್ಯಕತೆ ಇಲ್ಲ ಎಂದು ಊರವರು ಶಾಸಕರ ಬಳಿ ಹೇಳಿಕೊಂಡರು.

ವಿಸ್ಮಯ ನ್ಯೂಸ್ ದಿವಾಕರ್ ಸಂಪಖಂಡ ಸಿದ್ದಾಪುರ

Back to top button