ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗೂ ಪಾಸಿಟಿವ್
ಮಂಕಿ, ಗುಳದಕೇರಿ, ಖರ್ವಾ, ಕೊಳಗೆದ್ದೆ , ಹೊದಕ್ಕೆಶಿರೂರು, ಇಡಗುಂಜಿ ಭಾಗದಲ್ಲಿ ಸೋಂಕು ದೃಢ
ಹೊನ್ನಾವರ: ತಾಲೂಕಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ರವಿವಾರದಿಂದ ಶುಕ್ರವಾರದವರೆಗೆ ಕೇವಲ 6 ದಿನದಲ್ಲಿ ತಾಲೂಕಿನಲ್ಲಿ 66 ಕರೊನಾ ಪ್ರಕರಣ ದಾಖಲಾಗಿದೆ. ಇಂದೂ ಕೂಡಾ ತಾಲೂಕಿನಾದ್ಯಂತ 10 ಕೇಸ್ ದೃಢಪಟ್ಟಿದೆ. ಹೊನ್ನಾವರ ಪಟ್ಟಣದಲ್ಲಿ 2 ಮತ್ತು ಮಂಕಿ ಗುಳದಕೇರಿಯಲ್ಲಿ ಎರಡು ಪ್ರಕರಣ ಕಾಣಿಸಿಕೊಂಡಿದೆ. ಖರ್ವಾ, ಕೊಳಗೆದ್ದೆ ಭಾಗದಲ್ಲಿ ಮೂವರಲ್ಲಿ ಹಾಗು ಹೊದಕ್ಕೆಶಿರೂರಿನಲ್ಲಿ 1, ಕೇರವಳ್ಳಿ 1, ಇಡಗುಂಜಿಯಲ್ಲಿ ತಲಾ ಇಂದು ಪ್ರಕರಣ ದಾಖಲಾಗಿದೆ.
ಹೊನ್ನಾವರ ಪಟ್ಟಣದ 61 ವರ್ಷದ ಪುರುಷ, ತಹಶೀಲ್ದಾರ್ ಕಚೇರಿಯ 25 ವರ್ಷದ ಮಹಿಳೆ, ಮಂಕಿ ಗುಳದಕೇರಿಯ 46 ವರ್ಷದ ಪುರುಷ ಮತ್ತು 22 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಖರ್ವಾದ 23 ವರ್ಷದ ಯುವಕ, ಖರ್ವಾ ಕೋರೆಯ 65 ವರ್ಷದ ಪುರುಷ, ಕೊಳಗೆದ್ದೆಯ 42 ವರ್ಷದ ಪುರುಷ, ಹೋದಕೆಶಿರೂರಿನ 40 ವರ್ಷದ ಮಹಿಳೆ, ಕೆರವಳ್ಳಿಯ 41 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಅಲ್ಲದೆ, ಇಡಗುಂಜಿಯ 58 ವರ್ಷದ ಪುರುಷ ಸೇರಿದಂತೆ ಇಂದು 10 ಪ್ರಕರಣ ತಾಲೂಕಿನಲ್ಲಿ ಪತ್ತೆಯಾಗಿದೆ. ತಾಲೂಕಾ ಆಸ್ಪತ್ರೆಯಿಂದ ಒಬ್ಬರು ಡಿಸ್ಚಾರ್ಜ್ ಆಗಿದ್ದರೆ, 20 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 130 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಇಂದು 10 ಕೇಸ್ ದೃಢಪಟ್ಟ ಬೆನ್ನಲ್ಲೆ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 464 ಕ್ಕೆ ಏರಿಕೆಯಾಗಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ
ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ
ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ
ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 784883356