ಪಟ್ಟಣದ ಚಿತ್ರಗಿ ಭಾಗದಲ್ಲಿ ಗರಿಷ್ಠ ಪ್ರಕರಣ ದಾಖಲು
ಹೆಗಡೆ, ಮಾಸೂರು, ಗೋಕರ್ಣ, ನುಶಿಕೋಟೆ, ಗುಡಿಗಾರಗಲ್ಲಿ, ತಲಗೋಡು, ಗುಡ್ ಕಾಗಲ್ ನಲ್ಲಿ ಪಾಸಿಟಿವ್
ಕುಮಟಾ: ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಗರಿಷ್ಠ ಮಟ್ಟದಲ್ಲಿ ಕರೋನಾ ಸೋಂಕಿತ ಪ್ರಕರಣ ದಾಖಲಾಗುತ್ತಿದ್ದು, ಇಂದು ಕೂಡ ಕುಮಟಾ ತಾಲೂಕಾ ವ್ಯಾಪ್ತಿಯಲ್ಲಿ ಒಟ್ಟು 39 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ತಾಲೂಕಿನ ಚಿತ್ರಗಿ ಭಾಗದಲ್ಲಿ 7, ಹೆಗಡೆಯಲ್ಲಿ 3, ಮಾಸೂರು, ಗೋಕರ್ಣ, ನುಶಿಕೋಟೆ, ಗುಡಿಗಾರಗಲ್ಲಿ, ತಲಗೋಡು ಸೇರಿದಂತೆ ಹಲವೆಡೆ ಕೇಸ್ ದೃಢಪಟ್ಟಿದೆ.
ಕೋನಳ್ಳಿಯ 53 ವರ್ಷದ ಪುರುಷ, ದಿವಗಿ ನವಗ್ರಾಮದ 52 ವರ್ಷದ ಮಹಿಳೆ, ನುಶಿಕೋಟೆಯ 65 ವರ್ಷದ ಮಹಿಳೆ, ಗೋಕರ್ಣದ 49 ವರ್ಷದ ಪುರುಷ, ಗೋಕರ್ಣದ 22 ವರ್ಷದ ಯುವತಿ, ಗೋಕರ್ಣದ 47 ವರ್ಷದ ಮಹಿಳೆ, ಮಾಸೂರಿನ 28 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ. ಕುಮಟಾದ 54 ವರ್ಷದ ಪುರುಷ, ಕುಮಟಾದ 25 ವರ್ಷದ ಪುರುಷ, ಕುಮಟಾದ 53 ವರ್ಷದ ಪುರುಷ, ಕುಮಟಾದ 62 ವರ್ಷದ ಪುರುಷನಲ್ಲ ಕುಮಟಾದ 92 ವರ್ಷದ ವೃದ್ಧೆ, 46 ವರ್ಷದ ಮಹಿಳೆ, 28 ವರ್ಷದ ಯುವಕ, 23 ವರ್ಷದ ಯುವಕ, 83 ವರ್ಷದ ವೃದ್ಧ, 38 ವರ್ಷದ ಪುರುಷ, 54 ವರ್ಷದ ಮಹಿಳೆ, 51 ವರ್ಷದ ಪುರುಷ, 14 ವರ್ಷದ ಬಾಲಕಿ, 55 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಹೆಗಡೆಯ 38 ವರ್ಷದ ಮಹಿಳೆ, ಹೆಗಡೆಯ 40 ವರ್ಷದ ಪುರುಷ, ಹೆಗಡೆಯ 9 ವರ್ಷದ ಬಾಲಕ, ನೆಹರುನಗರದ 61 ವರ್ಷದ ಪುರುಷ, ಹಂದಿಗೋಣದ 10 ವರ್ಷದ ಬಾಲಕಿ, ಹಂದಿಗೋಣದ 67 ವರ್ಷದ ಪುರುಷ, ಗುಡಿಗಾರಗಲ್ಲಿಯ 43 ವರ್ಷದ ಪುರುಷ, ಹಾರೋಡಿಯ 40 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ. ಚಿತ್ರಗಿಯ 62 ವರ್ಷದ ಪುರುಷ, ಚಿತ್ರಗಿಯ 23 ವರ್ಷದ ಯುವಕ, ಚಿತ್ರಗಿಯ 40 ವರ್ಷದ ಮಹಿಳೆ, ಚಿತ್ರಗಿಯ 78 ವರ್ಷದ ವೃದ್ಧೆ, ಚಿತ್ರಗಿಯ 46 ವರ್ಷದ ಪುರುಷ, ಚಿತ್ರಗಿಯ 42 ವರ್ಷದ ಮಹಿಳೆ, ಚಿತ್ರಗಿಯ 32 ವರ್ಷದ ಮಹಿಳೆ, ತಲಗೋಡಿನ 47 ವರ್ಷದ ಪುರುಷ, ಗುಡ್‌ಕಾಗಲ್‌ನ 37 ವರ್ಷದ ಮಹಿಳೆ, ಗುಡ್‌ಕಾಗಲ್‌ನ 40 ವರ್ಷದ ಪುರುಷನಲ್ಲಿ ಸೋಂಕು ದೃಡಪಟ್ಟಿದೆ.
ಇಂದು 39 ಪ್ರಕರಣ ದಾಖಲಾದ ಬೆನ್ನಲ್ಲೆ, ತಾಲೂಕಿನಲ್ಲಿ ಕರೋನಾ ಸೋಂಕಿತರ ಸಂಖ್ಯೆ 550 ರ ಗಡಿದಾಟಿದಂತಾಗಿದೆ.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ
ಇದನ್ನೂ ಓದಿ: ಇಂದಿನ ಪ್ರಮುಖ ಸುದ್ದಿಗಳು
- ತಪಾಸಣೆ ವೇಳೆ ಸಗಣಿ ವಾಸನೆ: ಬಯಲಾಯ್ತು ಅಕ್ರಮ ಜಾನುವಾರು ಸಾಗಾಟ
- ಗಣಪತಿ ಮೂರ್ತಿ ವಿಸರ್ಜನೆ: ಪಂಚವಾದ್ಯ, ಕೇರಳದ ಚಂಡೆಯೊಂದಿಗೆ ಮರವಣಿಗೆ
- ಕೊನೆಗೂ ಸ್ವಚ್ಛತೆಯತ್ತ ಮುಖ ಮಾಡುತ್ತಿರುವ ಬಸ್ ನಿಲ್ದಾಣ: ಎಸಿ ಮತ್ತು ಲೋಕಾಯುಕ್ತ ಅಧಿಕಾರಿಗಳ ದಿಡೀರ್ ಭೇಟಿ ಫಲಿತಾಂಶ
- Adike Rate: ಇಂದಿನ ಅಡಿಕೆ ಧಾರಣೆ ಹೇಗಿದೆ: ಮಾರುಕಟ್ಟೆ ದರದ ವಿವರ ಇಲ್ಲಿದೆ ನೋಡಿ?
- ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ನಿಧನ