Follow Us On

WhatsApp Group
ಮಾಹಿತಿ

ಉತ್ತರ ಕನ್ನಡದಲ್ಲಿಂದು 179 ಕೇಸ್ ದಾಖಲು

Uttara Kannada Covid 19 News

139 ಮಂದಿ ಗುಣಮುಖರಾಗಿ ಬಿಡುಗಡೆ
ಶಿರಸಿಯಲ್ಲಿ ಒಂದು ಸಾವು
[sliders_pack id=”3491″]

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಶುಕ್ರವಾರ 179 ಕರೊನಾ ಪ್ರಕರಣ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟವದಂತೆ ಕುಮಟಾದಲ್ಲಿ 47, ಹೊನ್ನಾವರದಲ್ಲಿ 15, ಕಾರವಾರದಲ್ಲಿ 6, ಭಟ್ಕಳದಲ್ಲಿ 16, ಶಿರಸಿಯಲ್ಲಿ 03, ಸಿದ್ದಾಪುರ 21, ಮುಂಡಗೋಡಿನಲ್ಲಿ 27, ಹಳಿಯಾಳದಲ್ಲಿ 16, ಯಲ್ಲಾಪುರದಲ್ಲಿ 9, ಹಾಗೂ ಜೋಯಿಡಾದಲ್ಲಿ 19 ಮಂದಿಗೆ ಸೋಂಕು ದೃಢಪಟ್ಟಿದೆ.


ಇದೇ ವೇಳೆ ಇಂದು 135 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರದಲ್ಲಿ 11, ಅಂಕೋಲಾದಲ್ಲಿ 13, ಕುಮಟಾದಲ್ಲಿ 1, ಭಟ್ಕಳದಲ್ಲಿ 33, ಶಿರಸಿಯಲ್ಲಿ 10, ಸಿದ್ದಾಪುರದಲ್ಲಿ 16, ಯಲ್ಲಾಪುರದಲ್ಲಿ 12, ಹಳಿಯಾಳದಲ್ಲಿ 34, ಮುಂಡಗೋಡ 3, ಹಾಗೂ ಜೋಯಿಡಾದಲ್ಲಿ 2 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಶಿರಸಿಯಲ್ಲಿ ಒಂದು ಸಾವು:

ಇದೇ ವೇಳೆ, ಜಿಲ್ಲೆಯ ಶಿರಸಿಯಲ್ಲಿ ಕೊರೋನಾ ಸೋಂಕಿಗೆ ಒರ್ವ ಬಲಿಯಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ ಜಿಲ್ಲೆಯಲ್ಲಿ 56ಕ್ಕೆ ಏರಿಕೆಯಾಗಿದೆ. ಇಂದು 179 ಕರೊನಾ ಪ್ರಕರಣ ದಾಖಲಾದ ಬೆನ್ನಲ್ಲೆ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,548ಕ್ಕೆ ಏರಿಕೆಯಾಗಿದೆ. 650 ಮಂದಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

ಬೇಕಾಗಿದ್ದಾರೆ

ಪ್ರತಿಷ್ಠಿತ ಕಂಪನಿಗೆ ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಆಸಕ್ತಿ ಇದ್ದಲ್ಲಿ ಕೂಡಲೇ ಸಂಪರ್ಕಿಸಿ
ಸಂಪರ್ಕಿಸಿ: 7848833568

ಇದನ್ನೂ ಓದಿ: ಇಂದಿನ ಪ್ರಮುಖ ಸುದ್ದಿಗಳು

Back to top button