ಅಂಕೋಲಾ : ತಾಲೂಕಿನ ಗ್ರಾಮೀಣ ಪ್ರದೇಶದ ಪ್ರಮುಖ ದೇವಸ್ಥಾನ ಒಂದರ, ಪೂಜಾ ಹಕ್ಕಿಗೆ ಸಂಬಂಧಿಸಿದಂತೆ,ಎರಡು ಕುಟುಂಬಗಳ ನಡುವೆ ಇದ್ದ ಮನಸ್ತಾಪ ಮತ್ತು ದಾಯಾದಿ ಮತ್ಸರವೇ ಅತಿರೇಕಕ್ಕೆ ಹೋದಂತಿದ್ದು,ಜಗಳಾಟದ ಹಂತಕ್ಕೆ ತಲುಪಿ,ಓರ್ವನ ಮರ್ಮಾಂಗಕ್ಕೆ ಕಚ್ಚಿ ಘಾಸಿ ಗೊಳಿಸಿದರು ಎನ್ನಲಾದ ಘಟನೆಗೆ ಸಂಬಂಧಿಸಿದಂತೆ,ಪೊಲೀಸ್ ಠಾಣೆಯಲ್ಲಿ ತಡವಾಗಿ ದೂರು ದಾಖಲಾಗಿದೆ.
ಫಿರ್ಯಾದುದಾರರಾದ ರವಿರಾಜ (40 ವರ್ಷ) ಇವರು ಅಂಕೋಲಾ ಪೊಲೀಸ ಠಾಣೆಗೆ ಹಾಜರಾಗಿ ನೀಡಿದ ಲಿಖಿತದೂರಿನಲ್ಲಿ ತಿಳಿಸಿದಂತೆ ದಿನಾಂಕ 03-09-2024 ರಂದು ಬೆಳಿಗೆ 09- 15 ಗಂಟೆಯಿಂದ 09-45 ಗಂಟೆಯ ನಡುವಿನ ಅವಧಿಯಲ್ಲಿ, ತಾನು ಕೆಲಸ ಮಾಡುವ ಪಟ್ಟಣದ ಮೆಡಿಕಲ್ ಶಾಪಿಗೆ ಹೋಗಲು,ಅಂಕೋಲಾ ಪಟ್ಟಣದ ಮಸೀದಿಯೊಂದರ ಹತ್ತಿರ ಇರುವ ಬಸ್ ನಿಲ್ದಾಣದ ಎದುರು ನಡೆದುಕೊಂಡು ಹೋಗುತ್ತಿರುವಾಗ ಆಪಾದಿತನಾದ ಪ್ರಶಾಂತ ಇತನು ಫಿರ್ಯಾದಿಗೆ ಅಡ್ಡಗಟ್ಟಿ ತಡೆದಿದ್ದಾನೆ.
ಫಿರ್ಯಾದಿಗೆ ಆವಾಚ್ಯ ಶಬ್ದಗಳಿಂದ ಬೈದು, ದೂಡಿ ಹಾಕಿ, ಆಪಾದಿತನ ಮಕ್ಕಳಾದ ವಿನಾಯಕ ಹಾಗೂ ಅಭಿಷೇಕ ಇವರನ್ನು ಸ್ಥಳಕ್ಕೆ ಕರೆಯಿಸಿಕೊಂಡು ಫಿರ್ಯಾದಿಗೆ ಮೂವರು ಸೇರಿ ಕೈಯಿಂದ ಕಾಲಿನಿಂದ ಹೊಡೆದಿದ್ದು, ಅದೇ ಸಮಯಕ್ಕೆ, విಷಯ ತಿಳಿದು ಘಟನಾ ಸ್ಥಳಕ್ಕೆ ಬಂದ ಫಿರ್ಯಾದಿ (ರವಿ) ಯವರ ತಮ್ಮಂದಿರಾದ ಪ್ರವೀಣ ಮತ್ತು ಪ್ರಮೋದ ಇಬ್ಬರೂ ಬಂದು ಫಿರ್ಯಾದಿ ಮೇಲೆ ಹಲ್ಲೆ ಆಗುವದನ್ನು ತಪ್ಪಿಸಲು ಹೋದಾಗ ಆಪಾದಿತ ಪ್ರಶಾಂತ (ತಂದೆ )ಮತ್ತು ಆತನ ಇಬ್ಬರು ಮಕ್ಕಳು ಸಹಿತ ಮೂವರು ಸೇರಿ, ಅವರಿಗೂ ಹೊಡೆದು ಹಲ್ಲೆ ಮಾಡಿ ತಲೆಗೆ ಕೈಗೆ ಗಾಯನನೋವು ಪಡಿಸಿದ್ದಲ್ಲದೇ, ಆಪಾದಿತನಾದ ಪ್ರಶಾಂತ ಇತನು ಫಿರ್ಯಾದಿಯ ತಮ್ಮ ಪ್ರವೀಣ ಈತನ ಮ-ರ್ಮಾಂಗ-ವನ್ನು ಹಲ್ಲಿನಿಂದ ಕಚ್ಚಿ ಗಾಯಗೊಳಿಸಲಾಗಿದೆ.
ಆಗ ಪಿರ್ಯಾದಿಯು ಬಿಡಿಸಲು ಹೋದಾಗ, ಆಪಾದಿತ ಪ್ರಶಾಂತನು ಫಿರ್ಯಾದಿ ರವಿ ಯ ಬಲ ಕೈ ತೋಳಿನ ಕೆಳಭಾಗದಲ್ಲಿ ಹಲ್ಲಿನಿಂದ ಕಚ್ಚಿ ಗಾ ಯನೋವು ಪಡಿಸಿದ್ದು ,ನಂತರ ಅಪಾದಿತರು ಜನರು ಸೇರುವುದನ್ನು ನೋಡಿ,ಇನ್ನೊಂದು ಸಾರಿ ನಿಮ್ಮನ್ನ ಜೀವ ಸಹಿತ ಬಿಡುವದಿಲ್ಲಾಂತ ಬೆದರಿಕೆ ಹಾಕಿ ಹೋಗಿದ್ದು ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಕೈಗೊಂಡು ನ್ಯಾಯವದಗಿಸ ಬೇಕಾಗಿ ವಿನಂತಿ ಇದ್ದು, ಈ ದೂರನ್ನು ತಾನು ಕಾರವಾರ ಜಿಲ್ಲಾ ಆಸ್ಪತ್ರೆಯಲಿ.ಹೆಚ್ಚಿನ ಚಿಕಿತ್ಸೆಯನ್ನು ಪಡೆದು ಈ ದಿನ (06 – 09 – 2024 ರಂದು ) ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ಒಟ್ಟಾರೆ ಘಟನೆ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಿದೆ.ಮೇಲ್ನೋಟಕ್ಕೆ ಇದು ಪರಸ್ಪರ ಈ ಎರಡು ಕುಟುಂಬಗಳ ನಡುವಿನ ವೈಯಕ್ತಿಕ ವೈಮನಸ್ಸು ಆಗಿರಬಹುದು ಆದರೂ ಸಹ, ಇವರ ನಡೆ ನುಡಿಗಳು,ಊರು ಹಾಗೂ ಸಮಾಜಕ್ಕೆ ಕೆಟ್ಟ ಸಂದೇಶ ತಲುಪದಂತೆ, ಮತ್ತು ಗ್ರಾಮದ ಭಕ್ತಾದಿಗಳ ಮನಸ್ಸಿಗೂ ನೋವು ಮತ್ತು ಬೇಸರವಾಗದಂತೆ ಎರಡು ಕುಟುಂಬಗಳು,ತಮ್ಮ ಜವಾಬ್ದಾರಿ ನಿಭಾಯಿಸಬೇಕೆಂಬ ಮಾತು ಕೆಲ ಪ್ರಜ್ಞಾವಂತರಿಂದ ಕೇಳಿ ಬಂದಂತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ