ಕುಮಟಾ: ತಾಲೂಕಿನ ಅಂತ್ರವಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯ ಸಮೀಪ ಇದೇ ಮೊದಲ ಬಾರಿಗೆ ಸಾರ್ವಜನಿಕ ಗಣೇಶನನ್ನು ಪ್ರತಿಷ್ಠಾಸಿ, ಪೂಜಿಸಲಾಯಿತು. ಹೊಸ ತಲೆ ಮಾರಿನ ಊರಿನ ಯುವಕರೆಲ್ಲ ಸೇರಿ, ರೊಲೆಕ್ಸ್ ಗಣೇಶೋತ್ಸವ ಸಮಿತಿ ಮಾಡಿಕೊಂಡು, ಧಾರ್ಮಿಕ ವಿಧಿವಿಧಾನದಂತೆ ವಿಘ್ನನಿವಾರಕ ಮಹಾಗಣಪತಿಯನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದರು,
ಗಣಪತಿ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಮೂರು ದಿನಗಳ ಕಾಲ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ, ಅದ್ದೂರಿ ಮೆರವಣಿಗೆಯೊಂದಿಗೆ, ವಿಸರ್ಜಿಸಲಾಯಿತು. ಅಚ್ಚುಕಟ್ಟು ಕಾರ್ಯಕ್ರಮ, ಶಿಸ್ತುಬುದ್ಧ ವ್ಯವಸ್ಥೆ ಮತ್ತು ತಮ್ಮ ಸಂಘಟನೆ ಮೂಲಕ ರೆಲೆಕ್ಸ್ ಗಣೇಶೋತ್ಸವ ಸಮಿತಿಯವರು ಮೊದಲ ಸಾರ್ವಜನಿಕ ಗಣೇಶೋತ್ಸವದಲ್ಲೇ ಗಮನಸೆಳೆದರು.
ವಿಸ್ಮಯ ನ್ಯೂಸ್, ಕುಮಟಾ